ಟೀನೇಜರ‍್ಸ್ ಲವ್‌ಲೈಫ್ ಬಗ್ಗೆ ಹೀಗೆ ತಿಳಿಯಿರಿ, ಪೋಷಕರಿಗೊಂದಿಷ್ಟು ಸಲಹೆ..

ಇತ್ತೀಚಿನ ಮಕ್ಕಳಿಗೆ ನಾವಂದುಕೊಂಡದ್ದಕ್ಕಿಂತ ಮುನ್ನವೇ ಪ್ರೀತಿ, ಪ್ರೇಮ ವಿಷಯಗಳ ಮೇಲೆ ಆಸಕ್ತಿ ಮೂಡುತ್ತದೆ. ಅಲ್ಲದೇ ಅದನ್ನು ಅನುಭವಿಸುವ ಆಸಕ್ತಿಯೂ ಅವರಲ್ಲಿ ಇರುತ್ತದೆ. ಅವರಿಗೆ ಈಗಿರುವ ಎಕ್ಸ್‌ಪೋಶರ್‌ನಿಂದ ಎಲ್ಲವೂ ಬೇಗ ಅರ್ಥವಾಗಿ ದೊಡ್ಡವರಾಗುತ್ತಾರೆ.

ಆದರೆ ತಂದೆ ತಾಯಿ ಜೊತೆ ಇದನ್ನು ಮಾತನಾಡಲು ಇಷ್ಟಪಡುವುದಿಲ್ಲ. ಅಪ್ಪ ಅಮ್ಮನ ಬಳಿ ಹೇಳಿಕೊಂಡರೆ ಸ್ನೇಹಿತರು ಯಾವ ಸೀಕ್ರೆಟ್ ಶೇರ್ ಮಾಡೋದಿಲ್ಲ, ನನ್ನನ್ನು ದೂರ ಮಾಡ್ತಾರೆ ಎನ್ನುವ ಭಯ ಅವರದ್ದು. ಹೇಳದೇ ಒಳಗೊಳಗೆ ಮಕ್ಕಳು ತಪ್ಪು ಮಾಡುತ್ತಾರೆ. ಅವರ ಜೊತೆ ಸಂಬಂಧಗಳ ಬಗ್ಗೆ ಹೀಗೆ ಮಾತನಾಡಿ..

  • ಜಗಳ ಮಾಡಬೇಡಿ, ಕೂಗಾಡಬೇಡಿ, ಕಿತ್ತಾಡಬೇಡಿ. ಅವರ ದಾರಿಯಲ್ಲಿ ನೀವು ಬನ್ನಿ. ಅವರನ್ನು ನೀವು ಅರ್ಥಮಾಡಿಕೊಳ್ಳಿ.
  • ಅವರ ಸಂಬಂಧ ಹಾಳುಮಾಡೋಕೆ ಫೋನ್ ಕಿತ್ತುಕೊಳ್ಳೋದು, ಮನೆಯಿಂದ ಹೊರಹೋಗದಂತೆ ಮಾಡುವುದು. ಇದನ್ನೆಲ್ಲಾ ಮಾಡಬೇಡಿ. ಇದು ಅವರನ್ನು ಇನ್ನಷ್ಟು ಪ್ರೀತಿಸುವಂತೆ ಹಾಗೂ ನಿಮ್ಮನ್ನು ಇನ್ನಷ್ಟು ದೂರ ಸರಿಯುವಂತೆ ಮಾಡುತ್ತದೆ.
  • ಅವರ ಸಂಬಂಧವನ್ನು ಅವಲೋಕಿಸಿ, ಇದೆಲ್ಲಾ ಕ್ಷಣಿಕ ಎಂದು ನಿಮಗೆ ತಿಳಿದಿರಲಿ. ಆದರೆ ಅವರಿಗೆ ಅದನ್ನು ಹೇಳಬೇಡಿ. ಅವರು ಕೆಟ್ಟ ದಾರಿಯಲ್ಲಿ ಹೋಗದಂತೆ ಕಾದರೆ ಸಾಕು.
  • ಮಕ್ಕಳನ್ನು ಪ್ರಶ್ನಿಸಿ, ಅವರ ಇಂಟ್ರೆಸ್ಟ್ ಬಗ್ಗೆ, ಸಂಬಂಧದ ಬಗ್ಗೆ ಅವರೇನು ಮಾಡುತ್ತಿದ್ದಾರೆ, ಸಂಬಂಧ ಹೇಗಿದೆ ಎನ್ನುವ ಬಗ್ಗೆ ಸ್ನೇಹಿತರಂತೆ ಹಾಯಾಗಿ ಮಾತನಾಡಿ.
  • ಬೌಂಡರಿಗಳ ಬಗ್ಗೆ ಮಾತನಾಡಿ. ರಿಲೇಷನ್‌ಶಿಪ್‌ನಲ್ಲಿ ಇದ್ದರೂ ಎಲ್ಲಿಯವರೆಗೆ ಎಲ್ಲವೂ ಸರಿ, ತಪ್ಪು ತಿಳಿಸಿ ಹೇಳಿ.
  • ಉತ್ತಮವಾದ, ಆರೋಗ್ಯಕರವಾದ ಸಂಬಂಧ ಹೇಗಿರುತ್ತದೆ, ಹೇಗೆ ಕಾಣುತ್ತದೆ ಉದಾಹರಣೆ ಸಮೇತ ವಿವರಿಸಿ.
  • ಕೆಟ್ಟ ಸಂಬಂಧ ಎಂದರೇನು, ಸಂಬಂಧದಲ್ಲಿ ಯಾವುದನ್ನು ಒಪ್ಪುವುದು ಅಸಾಧ್ಯ. ಎಲ್ಲಿಯವರೆಗೆ ಸಹಿಸಬೇಕು ಇವನ್ನೆಲ್ಲಾ ತಿಳಿಹೇಳಿ.
  • ಮೊಬೈಲ್, ಇಂಟರ್ನೆಟ್ ಬಳಕೆ ಮಾಡಿ ಯಾವ ರೀತಿ ಸಂಬಂಧವನ್ನು ದುರುಪಯೋಗ ಮಾಡುತ್ತಾರೆ ಎನ್ನುವ ಬಗ್ಗೆ ಮಕ್ಕಳಿಗೆ ತಿಳಿ ಹೇಳಿ.
  • ಸಂಬಂಧದಲ್ಲಿ ಏನಾದರೂ ಸಮಸ್ಯೆಯಾಗಿದ್ದರೆ ಅದರ ಬಗ್ಗೆ ಮನಬಿಚ್ಚಿ ಮಾತನಾಡುವಷ್ಟು ಫ್ರೀಯಾಗಿರಿ. ಮಾತನಾಡಲು ಅವಕಾಶ ಮಾಡಿಕೊಡಿ.
  • ಬ್ರೇಕಪ್ ಆದಾಗಲೂ ಮಕ್ಕಳ ಜೊತೆ ಇರಿ. ಅವರನ್ನು ಅದರಿಂದ ಹೊರಬರಲು ಸಹಾಯ ಮಾಡಿ.
  • ಸಂಬಂಧದಲ್ಲಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎನ್ನುವ ಸಣ್ಣ ಸುಳಿವು ಕಾಣಿಸಿದಾಗ ಹೇಳುವಂತೆ ಮಾತನಾಡಿ.
  • ಸ್ನೇಹಿತರ ರೀತಿ ಮಕ್ಕಳ ಜೊತೆ ಮಾತನಾಡುವುದನ್ನು ಕಲಿಯಿರಿ. ಆಗ ಅವರಾಗಿಯೇ ಬಂದು ಎಲ್ಲವನ್ನೂ ನಿಮ್ಮ ಜೊತೆ ಹೇಳಿಕೊಳ್ಳುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!