ಹೊಸದಿಗಂತ ಡಿಜಿಟಲ್ ಡೆಸ್ಕ್:
ವಯನಾಡು ಜಲಪ್ರಳಯಕ್ಕೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಲಕ ಬಲಿಯಾಗಿದ್ದಾನೆ. ಗುಹ್ಯ ಗ್ರಾಮದ ರೋಹಿತ್ ಮೃತ ಬಾಲಕ. ರೋಹಿತ್‌ನನ್ನು ಈತನ ತಾಯಿ ವಾಯನಾಡಿನಲ್ಲಿದ್ದ ಅಕ್ಕನ ಮನೆಯಲ್ಲಿ ಬಿಟ್ಟು ಬಂದಿದ್ದರು.
ಒಂದು ತಿಂಗಳ ಹಿಂದೆ ಕವಿತಾ ತನ್ನ ಕಿರಿಯ ಮಗ ರೋಹಿತ್ ಜೊತೆ ವಯನಾಡುವಿನ ಮೆಪ್ಪಾಡಿಯಲ್ಲಿರುವ ಅಕ್ಕನ ಮನೆಗೆ ತೆರಳಿದ್ದರು. ನಂತರ ರೋಹಿತ್‌ನನ್ನು ಅಕ್ಕನ ಮನೆಯಲ್ಲೇ ಬಿಟ್ಟು ಕ್ಯಾಲಿಕಟ್‌ನಲ್ಲಿರುವ ಮನೆಯೊಂದರ ಕೆಲಸಕ್ಕೆ ಕವಿತಾ ಹೋಗಿದ್ದರು. ಈ ದುರಂತದಲ್ಲಿ ರೋಹಿತ್ ಪ್ರಾಣಬಿಟ್ಟಿದ್ದಾನೆ ಎನ್ನಲಾಗಿದೆ.
ವಯನಾಡು ದುರಂತದಲ್ಲಿ ಮೃತರ ಸಂಖ್ಯೆ 249ಕ್ಕೆ ಏರಿಕೆಯಾಗಿದ್ದು, ಇನ್ನೂ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.