January21, 2026
Wednesday, January 21, 2026
spot_img

ಕೋಗಿಲು ಲೇಔಟ್ ತೆರವು: ರಾಜ್ಯ ರಾಜಕಾರಣಕ್ಕೆ ಕೇರಳ ಹಸ್ತಕ್ಷೇಪ, ಎಂಪಿ, ಎಂಎಲ್‌ಎಗಳ ಭೇಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋಗಿಲು ಲೇಔಟ್‌ನಲ್ಲಿ ಅಕ್ರಮವಾಗಿ ನಿರ್ಮಾಣವಾಗಿದ್ದ ಮನೆಗಳನ್ನು ಜಿಬಿಎ ತೆರವುಗೊಳಿಸಿದ ಬಳಿಕ ಈ ವಿಚಾರ ಈಗ ರಾಜ್ಯಮಟ್ಟ ಮಟ್ಟ ಮಾತ್ರವಲ್ಲದೆ ಕೇರಳ ರಾಜ್ಯದವರೆಗೂ ತಲುಪಿದೆ. ಜಿಬಿಎ ಕಾರ್ಯಾಚರಣೆ ನಡೆದ ಪ್ರದೇಶಕ್ಕೆ ಕೇರಳದ ಸಂಸದರು ಮತ್ತು ಶಾಸಕರು ಭೇಟಿ ನೀಡಿರುವುದು ಕರ್ನಾಟಕ ರಾಜಕೀಯ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಕೋಗಿಲು ಲೇಔಟ್‌ ಗೆ ಕೇರಳ ಸಂಸದ ಎ.ಎ.ರಹೀಂ ಹಾಗೂ ಇಂದು ಮಾಜಿ ಸಚಿವ, ಶಾಸಕ ಕೆ.ಟಿ.ಜಲೀಲ್ ಭೇಟಿ ನೀಡಿದ್ದು, ಜೆಡಿಎಸ್ ನಾಯಕ ಸಿ.ಎಂ. ಇಬ್ರಾಹಿಂ ಆಗಮನದಿಂದ ಈ ಪ್ರಕರಣಕ್ಕೆ ಮತ್ತಷ್ಟು ರಾಜಕೀಯ ಆಯಾಮ ಸೇರ್ಪಡೆಯಾಗಿದೆ.

ಇದನ್ನೂ ಓದಿ:

ಕರ್ನಾಟಕದ ಆಂತರಿಕ ಆಡಳಿತಾತ್ಮಕ ತೀರ್ಮಾನಗಳಿಗೆ ಕೇರಳದ ನಾಯಕರು ಅನಾವಶ್ಯಕವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಕೇರಳ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ರಾಜಕೀಯ ಲೆಕ್ಕಾಚಾರಕ್ಕಾಗಿ ಕರ್ನಾಟಕದ ವಿಷಯಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಟೀಕೆಗಳು ಜೋರಾಗಿವೆ. ಕೋಗಿಲು ಲೇಔಟ್‌ನ ಅಕ್ರಮವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಕೇರಳ ಮೂಲದ ಕಾಂಗ್ರೆಸ್ ನಾಯಕರು ದೆಹಲಿಯಿಂದ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

ಈ ನಡುವೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೆಸರು ಚರ್ಚೆಗೆ ಬಂದಿದ್ದು, ರಾಜಕೀಯ ಜಟಾಪಟಿ ಮತ್ತಷ್ಟು ತೀವ್ರಗೊಂಡಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಸಿಎಂ ಮತ್ತು ಡಿಸಿಎಂ ಜೊತೆ ಮಾತುಕತೆ ನಡೆಸಿ ಮಾನವೀಯ ದೃಷ್ಟಿಕೋನದಿಂದ ಪರಿಹಾರ ನೀಡುವಂತೆ ಸಲಹೆ ನೀಡಿದ್ದಾರೆ. ಆದರೆ ತೆರವು ಕಾರ್ಯಾಚರಣೆ ಸಂಪೂರ್ಣ ಕಾನೂನುಬದ್ಧವಾಗಿದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ ಈ ಸಲಹೆ ವಿರೋಧಕ್ಕೆ ಗುರಿಯಾಗಿದೆ.

Must Read