ಕೊಹ್ಲಿ ಪಾಲಿಗೆ IPL​​ ಅಧಿಪತಿ ಪಟ್ಟ.. ವಿರಾಟ್​ ವೀರಾವೇಶದ ಮುಂದೆ ಸೈಡ್​ಲೈನ್ ಆದ ಚೆನ್ನೈ ಪ್ಲೇಯರ್!​

ಹೊಸದಿಗಂತ ಡಿಜಿಟಲ್ ಡೆಸ್ಕ್:

Mr. IPL​ ಈ ಹೆಸರು ಕೇಳಿದಾಕ್ಷಣ ನೆನಪಾಗೋದು ಸುರೇಶ್​ ರೈನಾ. ಆದರೆ ಇನ್ಮೇಲೆ ರೈನಾ ಅಲ್ಲ, ವಿರಾಟ್​ ಕೊಹ್ಲಿನ ಮಿಸ್ಟರ್​ ಐಪಿಎಲ್​ ಅನ್ನಬೇಕು. ವಿರಾಟ್​ ವೀರಾವೇಷದ ಮುಂದೆ ಈಗ ರೈನಾ ಸೈಡ್​ಲೈನ್​ ಆಗಿದ್ದಾರೆ.

ಹೌದು, ರೈನಾ ಮಿಸ್ಟರ್ ಐಪಿಎಲ್ ಅಂತಾನೇ ಫೇಮಸ್​. ರೈನಾ ಅವರ ಕನ್ಸಿಸ್ಟೆಂಟ್ ಆಟಕ್ಕೆ ಸಿಕ್ಕ ಬಿರುದೇ ಮಿಸ್ಟರ್ ಐಪಿಎಲ್. ಇದೀಗ ಈ ಮಿಸ್ಟರ್​ ಐಪಿಎಲ್​ ಪಟ್ಟ, ವಿಶ್ವ ಕ್ರಿಕೆಟ್​ನ ರೂಲರ್ ಕಿಂಗ್ ಕೊಹ್ಲಿ ಪಾಲಾಗಿದೆ. ಸದ್ಯ ಫ್ರಾಂಚೈಸಿ ಲೀಗ್​ನಲ್ಲಿ ಅಬ್ಬರಿಸ್ತಿರುವ ವಿರಾಟ್, ಇಂಡಿಯನ್ ಪ್ರೀಮಿಯರ್ ಲೀಗ್​​ನ ಅಧಿಪತಿಯ ಪಟ್ಟವೇರಿದ್ದಾರೆ.

ಆರಂಭಿಕ 2 ಸೀಸನ್​​​​​​​​​​​​​​ ಬಿಟ್ರೆ, 2010ರಿಂದಲೂ ಕೊಹ್ಲಿ, ಐಪಿಎಲ್ ಅಖಾಡದಲ್ಲಿ ರನ್ ಬೇಟೆ ನಡೆಸಿದ್ದಾರೆ. ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿ, 8 ಬಾರಿ 500 ಪ್ಲಸ್ ರನ್ ದಾಖಲಿಸಿದ್ದಾರೆ. ಕೊಹ್ಲಿ ದಾಖಲೆಯ ಆಟವಾಡಿದ್ರೆ, ಮಿಸ್ಟರ್​ ಐಪಿಎಲ್​ ಎನಿಸಿಕೊಂಡಿದ್ದ ರೈನಾ 12 ಐಪಿಎಲ್​ ಸೀಸನ್​ಗಳಿಂದ 3 ಬಾರಿ ಮಾತ್ರ 500ಕ್ಕೂ ಅಧಿಕ ರನ್​ಗಳಿಸಿದ್ದಾರೆ. ಈ ಟ್ರ್ಯಾಕ್​ ರೆಕಾರ್ಡ್​ ನೋಡಿದ್ರೆ, ಮಿಸ್ಟರ್​ ಐಪಿಎಲ್ ಪಟ್ಟಕ್ಕೆ ವಿರಾಟ್ ಕೊಹ್ಲಿ ಪರ್ಫೆಕ್ಟ್ ಚಾಯ್ಸ್​ ಅಂದ್ರೆ ತಪ್ಪಾಗಲ್ಲ.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!