ಕೊಹ್ಲಿ, ಬೆಥೆಲ್ ಅಬ್ಬರದ ಜೊತೆ ಶೆಫರ್ಡ್ ಸ್ಪೋಟಕ ಬ್ಯಾಟಿಂಗ್: ಸಿಎಸ್‌ಕೆ ಗೆಲುವಿಗೆ ಬಿಗ್ ಟಾರ್ಗೆಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕೊನೆಯಲ್ಲಿ ರೊಮ್ಯಾರಿಯೋ ಶೆಫರ್ಡ್ ಸ್ಫೋಟಕ ಬ್ಯಾಟಿಂಗ್ , ಜೊತೆಗೆ ವಿರಾಟ್ ಕೊಹ್ಲಿ , ಜಾಕೋಬ್​ ಬೆಥೆಲ್ ಆರ್ಭಟಕ್ಕೆ ಆರ್‌ಸಿಬಿ (RCB) 20 ಓವರ್‌ಗಳಲ್ಲಿ 213 ರನ್‌ ಕಲೆಹಾಕಿ, ಸಿಎಸ್‌ಕೆ ಗೆಲುವಿಗೆ 214 ರನ್‌ಗಳ ಗುರಿ ನೀಡಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ ಆರಂಭದಿಂದಲೇ ಅಬ್ಬರಿಸಲು ಶುರು ಮಾಡಿತು. ಮೊದಲ ವಿಕೆಟ್‌ಗೆ ವಿರಾಟ್‌ ಕೊಹ್ಲಿ ಮತ್ತು ಜಾಕೊಬ್‌ ಬೆಥೆಲ್‌ ಜೋಡಿ 59 ಎಸೆತಗಳಲ್ಲಿ 97 ರನ್‌ಗಳ ಜೊತೆಯಾಟ ನೀಡಿತ್ತು. ವಿರಾಟ್‌ ಕೊಹ್ಲಿ 62 ರನ್‌ (33 ಎಸೆತ, 5 ಸಿಕ್ಸರ್‌, 5 ಬೌಂಡರಿ), ಬೆಥೆಲ್‌ 55 ರನ್‌ಗಳಿಸಿ (33 ಎಸೆತ, 2 ಸಿಕ್ಸರ್‌, 8 ಬೌಂಡರಿ), ಔಟಾದರು. ಬಳಿಕ ಬಂದ ಆಟಗಾರರರು ತಂಡದ ರನ್ ಹೆಚ್ಚಿಸಿದರು. ಅಂತಿಮವಾಗಿ ಕ್ರೀಸ್‌ಗೆ ಬಂದ ರೊಮಾರಿಯೋ ಶೆಫರ್ಡ್‌ 19ನೇ ಓವರ್‌ನಲ್ಲಿ ಖಲೀಲ್‌ ಅಹ್ಮದ್‌ ಬೌಲಿಂಗ್‌ಗೆ ಒಂದೇ ಓವರ್‌ನಲ್ಲಿ 33 ರನ್‌ ಚಚ್ಚಿದರು. ಜೊತೆಗೆ 20ನೇ ಓವರ್‌ನಲ್ಲಿ ಬರೋಬ್ಬರಿ 20 ರನ್‌ ಚಚ್ಚಿದ ಪರಿಣಾಮ ಆರ್‌ಸಿಬಿ ಸುಲಭವಾಗಿ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

ಆರ್‌ಸಿಬಿ ಪರ ದೇವದತ್‌ ಪಡಿಕಲ್‌ 17 ರನ್‌, ರಜತ್‌ ಪಾಟಿದಾರ್‌ 11 ರನ್‌, ಜಿತೇಶ್‌ ಶರ್ಮಾ 7 ರನ್‌, ಟಿಮ್‌ ಡೇವಿಡ್‌ 2 ರನ್‌ ಕೊಡುಗೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!