ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಅವರು ರಣಜಿ ಕ್ರಿಕೆಟ್ನಲ್ಲಿ ಆಡೋಕೆ ಬಂದಿದ್ದಾರೆ. ಡೆಲ್ಲಿ ತಂಡದ ಪರ ಅವರು ಆಡುತ್ತಿದ್ದಾರೆ. ಕೊಹ್ಲಿ ಆಟವನ್ನು ನೋಡಲು ಬಂದ ಅಭಿಮಾನಿಗಳಿಗೆ ಅವರು ನಿರಾಸೆ ಮಾಡಿದ್ದಾರೆ. ಬೌಂಡರಿ ಸಿಡಿಸಿದ ಮರು ಬಾಲ್ನಲ್ಲಿ ಕೊಹ್ಲಿ ಬೋಲ್ಡ್ ಆಗಿದ್ದಾರೆ. ಆರು ರನ್ಗೆ ವಿಕೆಟ್ ಒಪ್ಪಿಸಿ ಅವರು ಪೆವಿಲಿಯನ್ ಸೇರಿದ್ದಾರೆ. ಈ ಮೂಲಕ ಇಲ್ಲಿಯೂ ಅವರು ಕಳಪೆ ಫಾರ್ಮ್ ಮುಂದುವರಿದಿದೆ.
ಬೆಳಗ್ಗೆ ಆರು ಗಂಟೆಯಿಂದಲೇ ಕೊಹ್ಲಿ ನೋಡೋದಕ್ಕಾಗಿ ಫ್ಯಾನ್ಸ್ ಕ್ಯೂನಲ್ಲಿ ನಿಂತು ಕಾದಿದ್ದಾರೆ. ರಣಜಿ ಪಂದ್ಯಕ್ಕೆ ಇಷ್ಟೊಂದು ಜನ ಆಗಮಿಸಿರುವುದು ಇದೇ ಮೊದಲಾಗಿದೆ. ಪೊಲೀಸರು ಫ್ಯಾನ್ಸ್ ನಿಯಂತ್ರಣ ಮಾಡಲಾಗದೆ ಹರಸಾಹಸ ಪಟ್ಟಿದ್ದಾರೆ. ಇಷ್ಟೆಲ್ಲಾ ಆದ ನಂತರ ಪಂದ್ಯಕ್ಕಾಗಿ ಕಾದು ಕುಳಿತ ಫ್ಯಾನ್ಸ್‌ಗೆ ನಿರಾಸೆಯಾಗಿದೆ.
ಕೊಹ್ಲಿ ಒಂದಂಕಿಗೆ ಔಟ್ ಆಗಿದ್ದು, ನಿರಾಸೆಯಿಂದ ಫ್ಯಾನ್ಸ್ ಉಳಿದ ಪಂದ್ಯ ನೋಡದೆ ಎದ್ದು ಹೋಗಿದ್ದಾರೆ. ಅರ್ಧಕ್ಕರ್ಧ ಸ್ಟೇಡಿಯಂ ಖಾಲಿ ಆಗಿದೆ.