Saturday, December 20, 2025

14 ವರ್ಷಗಳ ಬಳಿಕ ದೆಹಲಿ ಪರ ಕೊಹ್ಲಿ ಆಟ: ಮುಂಬೈ ಸಾರಥ್ಯಕ್ಕೆ ಮರಳಿದ ಹಿಟ್ ಮ್ಯಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡಿಸೆಂಬರ್ 24 ರಿಂದ ಆರಂಭವಾಗಲಿರುವ ಪ್ರತಿಷ್ಠಿತ ‘ವಿಜಯ್ ಹಜಾರೆ ಟ್ರೋಫಿ’ ದೇಶೀಯ ಏಕದಿನ ಕ್ರಿಕೆಟ್ ಟೂರ್ನಿಯು ಈ ಬಾರಿ ಹಬ್ಬದ ಕಳೆ ಪಡೆದಿದೆ. ಕಾರಣ, ಟೀಮ್ ಇಂಡಿಯಾದ ಇಬ್ಬರು ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಮ್ಮ ತವರು ತಂಡಗಳ ಪರ ಕಣಕ್ಕಿಳಿಯುತ್ತಿರುವುದು ಕ್ರಿಕೆಟ್ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

ದೆಹಲಿ ತಂಡವನ್ನು ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಮುನ್ನಡೆಸಲಿದ್ದಾರೆ. ವಿಶೇಷವೆಂದರೆ, ಸುಮಾರು 14 ವರ್ಷಗಳ ಸುದೀರ್ಘ ಬಿಡುವಿನ ನಂತರ ವಿರಾಟ್ ಕೊಹ್ಲಿ ಈ ಟೂರ್ನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೊಹ್ಲಿ ಕೊನೆಯದಾಗಿ 2010 ರಲ್ಲಿ ದೆಹಲಿ ಪರ ಆಡಿದ್ದರು. ಆರಂಭಿಕ ಎರಡು ಪಂದ್ಯಗಳಿಗೆ ಮಾತ್ರ ಕೊಹ್ಲಿ ಲಭ್ಯವಿರಲಿದ್ದಾರೆ.

ಇತ್ತ ಮುಂಬೈ ತಂಡವನ್ನು ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಮುನ್ನಡೆಸುತ್ತಿದ್ದು, ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ತಂಡದ ಪ್ರಮುಖ ಆಕರ್ಷಣೆಯಾಗಿದ್ದಾರೆ. 2019 ರ ನಂತರ ಮೊದಲ ಬಾರಿಗೆ ರೋಹಿತ್ ವಿಜಯ್ ಹಜಾರೆ ಟೂರ್ನಿಯಲ್ಲಿ ಬ್ಯಾಟ್ ಬೀಸಲಿದ್ದಾರೆ. ಇವರು ಕೂಡ ಮೊದಲ ಎರಡು ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಲಿದ್ದಾರೆ.

ದೆಹಲಿ ತಂಡಮುಂಬೈ ತಂಡ
ರಿಷಭ್ ಪಂತ್ (ನಾಯಕ), ವಿರಾಟ್ ಕೊಹ್ಲಿ, ಇಶಾಂತ್ ಶರ್ಮಾ, ನವದೀಪ್ ಸೈನಿ, ಆಯುಷ್ ಬದೋನಿ, ಅರ್ಪಿತ್ ರಾಣಾ, ಯಶ್ ಧುಲ್, ಸಾರ್ಥಕ್ ರಂಜನ್, ಪ್ರಿಯಾಂಶ್ ಆರ್ಯ, ತೇಜಸ್ವಿ ದಹಿಯಾ, ನಿತೀಶ್ ರಾಣಾ, ಹೃತಿಕ್ ಶೋಕೀನ್, ಹರ್ಷ್ ತ್ಯಾಗಿ, ಸಿಮರ್ಜೀತ್ ಸಿಂಗ್, ಪ್ರಿನ್ಸ್ ಯಾದವ್, ದಿವಿಜ್ ಮೆಹ್ರ, ಆಯುಷ್ ದೋಸೆಜ, ವೈಭವ್ ಕಡ್ಪಲ್, ರೋಹನ್ ರಾಣಾ. ಶಾರ್ದೂಲ್ ಠಾಕೂರ್ (ನಾಯಕ), ರೋಹಿತ್ ಶರ್ಮಾ, ಹಾರ್ದಿಕ್ ತಮೋರ್ (WK), ಇಶಾನ್ ಮುಲ್ಚಂದಾನಿ, ಶಮ್ಸ್ ಮುಲಾನಿ, ಮುಶೀರ್ ಖಾನ್, ತನುಷ್ ಕೋಟ್ಯಾನ್, ಅಂಗ್‌ಕ್ರಿಶ್ ರಘುವಂಶಿ, ತುಷಾರ್ ದೇಶಪಾಂಡೆ, ಸರ್ಫರಾಝ್ ಖಾನ್, ಓಂಕಾರ್ ತರ್ಮಲೆ, ಸಿದ್ದೇಶ್ ಲಾಡ್, ಸಿಲ್ವಸ್ಟರ್ ಡಿಸೋಝ, ಚಿನ್ಮಯ್ ಸುತಾರೆ, ಸಾಯಿರಾಜ್ ಪಾಟೀಲ್, ಆಕಾಶ್ ಆನಂದ್ (WK), ಸೂರ್ಯನಾಶ್ ಶೆಡ್ಗೆ.
error: Content is protected !!