ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೌತ್ ಆಫ್ರಿಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ವು ಡಿಸೆಂಬರ್ 22ರಿಂದ 2 ಪಂದ್ಯಗಳ ಟೆಸ್ಟ್ ಸರಣಿ ಆಡಲಿದ್ದು, ಈಗಾಗಲೇ ಟೆಸ್ಟ್ ಕ್ರಿಕೆಟಿಗರು ಸೌತ್ ಆಫ್ರಿಕಾದಲ್ಲಿ ಅಭ್ಯಾಸ ಆರಂಭಿಸಿದ್ದಾರೆ.
ಆದರೆ ತುರ್ತು ಅಗತ್ಯತೆ ಕಾರಣ ವಿರಾಟ್ ಕೊಹ್ಲಿ ದಿಢೀರ್ ಭಾರತಕ್ಕೆ ಮರಳಿದ್ದಾರೆ. ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಬಳಿ ಅನುಮತಿ ಪಡೆದಿರುವ ಕೊಹ್ಲಿ ತವರಿಗೆ ಮರಳಿದ್ದಾರೆ.
ಸೌತ್ ಆಫ್ರಿಕಾ ನೆಲದಲ್ಲಿ ಪ್ರತಿ ಭಾರಿ ಉತ್ತಮ ಪ್ರದರ್ಶನ ನೀಡಿರುವ ವಿರಾಟ್ ಕೊಹ್ಲಿ ಅನುಪಸ್ಥಿತಿ ಟೀಂ ಇಂಡಿಯಾ ಆತಂಕ ಹೆಚ್ಚಿಸಿದೆ. ಕೊಹ್ಲಿ ತವರಿಗೆ ಮರಳಿದ ಕಾರಣ ಸದ್ಯ ಸೌತ್ ಆಫ್ರಿಕಾ ವಿರುದ್ಧ ನಡೆಯುತ್ತಿರುವ 3ದಿನಗಳ ಅಭ್ಯಾಸ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
ಮೂಲಗಳ ಪ್ರಕಾರ ಡಿಸೆಂಬರ್ 22 ರಿಂದ ಆರಂಭಗೊಳ್ಳಲಿರುವ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಕೊಹ್ಲಿ ಹಾಜರಾಗಲಿದ್ದಾರೆ. ಡಿಸೆಂಬರ್ 22ಕ್ಕೂ ಮೊದಲು ಕೊಹ್ಲಿ ಸೌತ್ ಆಫ್ರಿಕಾಗೆ ತೆರಳಲಿದ್ದಾರೆ. ಎರಡೂ ಟೆಸ್ಟ್ ಪಂದ್ಯಕ್ಕೆ ಕೊಹ್ಲಿ ಲಭ್ಯರಾಗಲಿದ್ದಾರೆ ಎಂದು ಟೀಂ ಮ್ಯಾನೇಜ್ಮೆಂಟ್ ಹೇಳಿದೆ.
ಕೊಹ್ಲಿ ಕುಟುಂಬದ ತುರ್ತು ಅಗತ್ಯತೆ ಕಾರಣದಿಂದ ತವರಿಗೆ ಮರಳಿದ್ದಾರೆ. ಕೊಹ್ಲಿ ಶೀಘ್ರದಲ್ಲೇ ಸೌತ್ ಆಫ್ರಿಕಾಗೆ ಮರಳಲಿದ್ದಾರೆ ಎಂದು ಮ್ಯಾನೇಜ್ಮೆಂಟ್ ಹೇಳಿದೆ. ಐಸಿಸಿ ವಿಶ್ವಕಪ್