ಟೆಸ್ಟ್ ಕ್ರಿಕೆಟ್‌ಗೆ ಕೊಹ್ಲಿ ವಿದಾಯ: 12 ವರ್ಷಗಳ ಹಿಂದಿನ ಘಟನೆ ನೆನಪಿಸಿಕೊಂಡ ಸಚಿನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಕಳೆದ ವರ್ಷವಷ್ಟೇ ಟಿ20 ಮಾದರಿಗೆ ವಿದಾಯ ಹೇಳಿದ್ದ ವಿರಾಟ್ ಇನ್ನು ಮುಂದೆ ಟೀಂ ಇಂಡಿಯಾ ಪರ ಏಕದಿನ ಮಾದರಿಯಲ್ಲಿ ಮಾತ್ರ ಆಡಲಿದ್ದಾರೆ. ಇದೀಗ ಕೊಹ್ಲಿಯ ನಿವೃತ್ತಿಯ ಬಗ್ಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತಮ್ಮ ಎಕ್ಸ್ ಖಾತೆಯಲ್ಲಿ ಸುದೀರ್ಘ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದು, ವಿರಾಟ್ ನಿವೃತ್ತಿಗೆ ಅಭಿನಂದನೆ ಸಲ್ಲಿಸುತ್ತಾ, 12 ವರ್ಷಗಳ ಹಿಂದಿನ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.

‘ನೀವು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗುತ್ತಿದ್ದಂತೆ, 12 ವರ್ಷಗಳ ಹಿಂದೆ ನಾನು ನನ್ನ ಕೊನೆಯ ಟೆಸ್ಟ್ ಆಡಿದ ಆ ಸಮಯದ ಸುಂದರ ಘಟನೆಯೊಂದು ನನಗೆ ನೆನಪಾಗುತ್ತದೆ. ಆ ಸಮಯದಲ್ಲಿ ನೀವು ನಿಮ್ಮ ದಿವಂಗತ ತಂದೆಯ ನೆನಪಿಗಾಗಿ ನನಗೆ ಒಂದು ದಾರವನ್ನು ಉಡುಗೊರೆಯಾಗಿ ನೀಡಲು ಮುಂದಾದಿರಿ. ಅದು ತುಂಬಾ ವೈಯಕ್ತಿಕ ವಿಷಯವಾಗಿತ್ತು, ಆದ್ದರಿಂದ ಅದನ್ನು ತೆಗೆದುಕೊಳ್ಳುವುದು ಸರಿಯಲ್ಲ ಎಂದು ನಾನು ಭಾವಿಸಿದೆ. ಆದರೆ ನಿಮ್ಮ ಭಾವನೆಗಳು ಇನ್ನೂ ನನ್ನ ಹೃದಯವನ್ನು ಮುಟ್ಟುತ್ತವೆ.ಪ್ರತಿಯಾಗಿ ನೀಡಲು ನನ್ನ ಬಳಿ ಯಾವುದೇ ಥ್ರೆಡ್ ಇಲ್ಲದಿದ್ದರೂ, ನನಗೆ ನಿಮ್ಮ ಬಗ್ಗೆ ತುಂಬಾ ಗೌರವವಿದೆ.

ನಿಮ್ಮ ನಿವೃತ್ತಿಗೆ ನಾನು ಹೃದಯಾಂತರಾಳದಿಂದ ಶುಭಾಶಯಗಳು. ವಿರಾಟ್, ನಿಮ್ಮ ನಿಜವಾದ ಪರಂಪರೆಯೆಂದರೆ ದೇಶದ ಅಸಂಖ್ಯಾತ ಯುವಕರನ್ನು ಕ್ರಿಕೆಟ್ ಆಡಲು ಪ್ರೇರೇಪಿಸಿದ್ದೀರಿ. ನಿಮ್ಮ ಟೆಸ್ಟ್ ವೃತ್ತಿಜೀವನವು ಅತ್ಯುತ್ತಮವಾಗಿದೆ. ನೀವು ಕೇವಲ ರನ್ ಮಾತ್ರ ಕಲೆಹಾಕಿಲ್ಲ, ಬದಲಿಗೆ ಭಾರತೀಯ ಕ್ರಿಕೆಟ್‌ಗೆ ಹೊಸ ಗುರುತು, ಹೊಸ ಶಕ್ತಿ ಮತ್ತು ಹೊಸ ಅಭಿಮಾನಿಗಳನ್ನು ನೀಡಿದ್ದೀರಿ. ನಿಮ್ಮ ಅದ್ಭುತ ಟೆಸ್ಟ್ ವೃತ್ತಿಜೀವನಕ್ಕೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ. ಕೊಹ್ಲಿ ಬಗ್ಗೆ ಸಚಿನ್ ತೆಂಡೂಲ್ಕರ್ ಈ ರೀತಿಯ ಹೃದಯಸ್ಪರ್ಶಿ ಮಾತುಗಳನ್ನು ಹೇಳಿರುವುದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!