20 ವರ್ಷಗಳ ಬಳಿಕ ಮತ್ತೆ ತೆರೆಗೆ ಬರಲು ಸಜ್ಜಾಗಿದೆ ʼಕೋಯಿ ಮಿಲ್‌ ಗಯಾʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹೃತಿಕ್ ರೋಷನ್ ಮತ್ತು ಪ್ರೀತಿ ಜಿಂಟಾ ಅಭಿನಯದ ಬ್ಲಾಕ್​​ ಬಸ್ಟರ್ ಚಲನಚಿತ್ರ ‘ಕೋಯಿ ಮಿಲ್ ಗಯಾ’ ಮತ್ತೆ ತೆರೆಗೆ ಬರಲು ಸಜ್ಜಾಗಿದೆ.

20 ವರ್ಷಗಳ ಬಳಿಕ ತೆರೆಕಾಣುತ್ತಿರುವ ಈ ಸಿನಿಮಾವನ್ನು ಸಿನಿಪ್ರಿಯರು ಚಿತ್ರಮಂದಿರಗಳಿಗೆ ಹೋಗಿ ಕಣ್ತುಂಬಿಕೊಳ್ಳಬಹುದು.

ಈ ಚಿತ್ರವನ್ನು ಹೃತಿಕ್ ರೋಷನ್ ಅವರ ತಂದೆ ಸ್ಟಾರ್ ಡೈರೆಕ್ಟರ್ ರಾಕೇಶ್ ರೋಷನ್ ಅವರೇ ಬರೆದು, ನಿರ್ದೇಶಿಸಿದ್ದಾರೆ. 2003ರ ಆಗಸ್ಟ್ 8ರಂದು ಈ ಚಿತ್ರ ಬಿಡುಗಡೆಯಾಗಿತ್ತು. ಈ ಸಿನಿಮಾ ಬಾಕ್ಸ್​ ಆಫೀಸ್​ ವಿಚಾರದಲ್ಲಿ ಭರ್ಜರಿ ಯಶಸ್ಸು ಕಂಡಿತ್ತು.

ಕೋಯಿ ಮಿಲ್ ಗಯಾ ಚಲನಚಿತ್ರ 2023ರ ಆಗಸ್ಟ್ 8ರಂದು 20 ವರ್ಷ ಪೂರೈಸಲಿದೆ. ಈ ಹಿನ್ನೆಲೆಯಲ್ಲಿ ದೇಶದ ಪ್ರಮುಖ 30 ನಗರಗಳಲ್ಲಿ ಮತ್ತೊಮ್ಮೆ ಈ ಚಿತ್ರವನ್ನು ಮರು ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಆಗಸ್ಟ್ 4ರಂದು ಅಂದರೆ ಇದೇ ಶುಕ್ರವಾರ ಸಿನಿಮಾ ಮರು ಬಿಡುಗಡೆ ಆಗಲಿದೆ ಎಂಬ ತಿಳಿದುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!