ಹೊಸ ದಿಗಂತ ಡಿಜಿಟಲ್ ಡೆಸ್ಕ್:
‘ಕೋಲಾರ’ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಖಚಿತ ಎಂದು ಕೋಲಾರ ಕ್ಷೇತ್ರದ ಶಾಸಕ ಶ್ರೀನಿವಾಸ ಗೌಡ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಶ್ರೀನಿವಾಸ್ ಗೌಡ ‘ಕೋಲಾರ’ ಕ್ಷೇತ್ರದಲ್ಲಿ ಸಿದ್ಧರಾಮಯ್ಯ ಸ್ಪರ್ಧೆ ಖಚಿತವಾಗಲಿದ್ದು, ಅವರು ಕೋಲಾರ ಕ್ಷೇತ್ರದಲ್ಲಿ ನಿಲ್ಲುವುದು ಫಿಕ್ಸ್ ಆಗಿದೆ.
ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪರ ನಾವು ಪ್ರಚಾರ ಮಾಡಲಿದ್ದೇವೆ, ಇಲ್ಲಿ ಕಾಂಗ್ರೆಸ್ ಒಗ್ಗಟ್ಟಾಗಿದ್ದು, ಯಾವುದೇ ಕಾಂಗ್ರೆಸ್ ಬಣವಿಲ್ಲ, ನಾವು ಸಿದ್ದರಾಮಯ್ಯ ಪರ ಗೆಲುವಿಗಾಗಿ ಶ್ರಮಿಸಲಿದ್ದೇವೆ ಎಂದು ಹೇಳಿದರು.