February 7, 2026
Saturday, February 7, 2026
spot_img

ನೋಡಲಾಗದೇ ರೊಚ್ಚಿಗೆದ್ದ ಕೋಲ್ಕತಾ: ಆಯೋಜಕನಿಗೆ 14 ದಿನಗಳ ಪೊಲೀಸ್ ಕಸ್ಟಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅರ್ಜೆಂಟೀನಾದ ಖ್ಯಾತ ಫುಟ್ಬಾಲ್‌ ಆಟಗಾರ ಲಿಯೋನೆಲ್‌ ಮೆಸ್ಸಿ ಯನ್ನು ನೋಡಲು ಸಹಸ್ರಾರು ಜನರು ನೆರೆದಿದ್ದರಿಂದ ಕೋಲ್ಕತಾದ ಸಾಲ್ಟ್‌ಲೇಕ್‌ ಕ್ರೀಡಾಂಗಣದಲ್ಲಿ ನಡೆದಿದ್ದ ರಾದ್ಧಾಂತ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ‘ಗೋಟ್‌’ ಟೂರ್‌ ಆಯೋಜಕ ಸತದ್ರು ದತ್ತ ಅವರಿಗೆ ಜಾಮೀನು ನಿರಾಕರಿಸಲಾಗಿದೆ. ಅವರನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಲಿಯೋನೆಲ್ ಮೆಸ್ಸಿ ಕೋಲ್ಕತ್ತಾದಿಂದ ಹೈದರಾಬಾದ್‌ಗೆ ತೆರಳುತ್ತಿದ್ದಾಗ ದತ್ತಾ ಅವರನ್ನು ಪೊಲೀಸರು ಬಂಧಿಸಿದ್ದರು.

ಕೋಲ್ಕತಾದ ಕ್ರೀಡಾಂಗಣದಲ್ಲಿ 50 ಸಾವಿರ ಜನರು 5ರಿಂದ 20 ಸಾವಿರ ರು.ವರೆಗೆ ಟಿಕೆಟ್‌ ಖರೀದಿಸಿ ಗಂಟೆಗಟ್ಟಲೆಯಿಂದ ಮೆಸ್ಸಿ ಬರುವಿಕೆಗೆ ಕಾಯುತ್ತಿದ್ದರು. ಮೆಸ್ಸಿ ಆಗಮನವಾಗುತ್ತಿದ್ದಂತೆ ಅವರ ಸುತ್ತ ಸಾಕಷ್ಟು ಜನ ನಿಂತರು. ಗೊಂದಲವಾಯಿತು. ಅವರು ಕ್ರೀಡಾಂಗಣಕ್ಕೆ ಒಂದು ಸುತ್ತು ಹಾಕಲಿಲ್ಲ. ದೊಡ್ಡ ಪರದೆಗಳಲ್ಲೂ ಚಿತ್ರ ಸ್ಪಷ್ಟವಾಗಿ ಕಾಣಲಿಲ್ಲ. ಗೊಂದಲ ಹೆಚ್ಚಾಗಿ ಮೆಸ್ಸಿ 22 ನಿಮಿಷದಲ್ಲೇ ನಿರ್ಗಮಿಸಿದರು. ಕೆರಳಿದ ಜನ ಸ್ಟೇಡಿಯಂ ಕುರ್ಚಿ, ಬಾಟಲಿಗಳನ್ನು ಮೈದಾನಕ್ಕೆಸೆದು ಕೆಂಡಕಾರಿದರು.

ಸಾಲ್ಟ್‌ ಲೇಕ್‌ನಲ್ಲಿನ ಅವ್ಯವಸ್ಥೆ, ದಾಂಧಲೆಗೆ ಬಗ್ಗೆ ಸಾಮಾಜಿಕ ತಾಣ ‘ಎಕ್ಸ್‌’ನಲ್ಲಿ ಸಿಎಂ ಮಮತಾ ಬ್ಯಾನರ್ಜಿ, ಅಭಿಮಾನಿಗಳು ಹಾಗೂ ಮೆಸ್ಸಿಯ ಕ್ಷಮೆಯಾಚಿಸಿದ್ದಾರೆ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !