April 11, 2026
Saturday, April 11, 2026
spot_img

ಯೋಗಿ ನಾಡಿನಲ್ಲಿ ಮತ್ತೆ ಬುಲ್ಡೋಜರ್ ಸದ್ದು: ಸರಕಾರಿ ಜಾಗದಲ್ಲಿ ನಿರ್ಮಿಸಿದ್ದ ಪ್ರಾರ್ಥನಾ ಮಂದಿರ ನೆಲಸಮ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯೋಗಿ ನಾಡು ಉತ್ತರ ಪ್ರದೇಶದಲ್ಲಿ ಮತ್ತೆ ಬುಲ್ಡೋಜರ್ ಸದ್ದು ಮಾಡಿದ್ದು , 12 ವರ್ಷಗಳ ಹಿಂದೆ ಇಲ್ಲಿನ ಸೀತಾಪುರದ ಲೆಹರ್‌ಪುರ ಪ್ರದೇಶದಲ್ಲಿರುವ ಸರಕಾರಿ ಜಾಗದಲ್ಲಿ ಅನುಮತಿ ಇಲ್ಲದೆ ನಿರ್ಮಿಸಲಾದ ಪ್ರಾರ್ಥನಾ ಮಂದಿರವನ್ನು ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ.

ಇಂದು ಸ್ಥಳಕ್ಕೆ ತೆರಳಿದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಇತರ ಹಿರಿಯ ಅಧಿಕಾರಿಗಳು,ಬಿಗಿ ಭದ್ರತೆಯಲ್ಲಿ ಪ್ರಾರ್ಥನಾ ಮಂದಿರವನ್ನು ನೆಲಸಮಗೊಳಿಸಿದರು.

ಅಧಿಕಾರಿಗಳ ಪ್ರಕಾರ, ಇಲ್ಲಿನ ಕೆರೆಗೆ ಮೀಸಲಿಟ್ಟ ಜಾಗದಲ್ಲಿ ಅಕ್ರಮವಾಗಿ ಪ್ರಾರ್ಥನಾ ಮಂದಿರ ನಿರ್ಮಿಸಲಾಗಿತ್ತು. ಈ ಕುರಿತು ಗ್ರಾಮಸಭೆಯು ಡಿಸೆಂಬರ್ 18, 2025 ರಂದು ಪ್ರಕರಣ ದಾಖಲಿಸಲಾಗಿತ್ತು.

ಜನವರಿ 6, 2026 ರಂದು, ಕೋರ್ಟ್ ಪ್ರಾರ್ಥನಾ ಮಂದಿರ ನಿರ್ಮಾಣವನ್ನು ಕಾನೂನುಬಾಹಿರವೆಂದು ಘೋಷಿಸಿ, ತೆರವು ಮಾಡಲು ಆದೇಶಿಸಿತು. ಈ ಹಿನ್ನೆಲೆ ಸಂಬಂಧಪಟ್ಟವರಿಗೆ ನಿಗದಿತ ಅವಧಿಯೊಳಗೆ ಆವರಣವನ್ನು ಖಾಲಿ ಮಾಡಲು ನೊಟೀಸ್ ನೀಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಗಡುವು ಮುಗಿದರೂ ತೆರವು ಆಗದ ಕಾರಣ ಇಂದು ನೆಲಸಮಗೊಳಿಸಲಾಗಿದೆ ಎಂದು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !