Monday, August 8, 2022

Latest Posts

ಮುಂಬೈ ವಿರುದ್ಧ ಟಾಸ್​ ಗೆದ್ದ ಕೋಲ್ಕತ್ತಾ ಬೌಲಿಂಗ್ ಆಯ್ಕೆ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೋಲ್ಕತ್ತಾ ನೈಟ್​ ರೈಡರ್ಸ್ ತಂಡ ಬಲಿಷ್ಠ ಮುಂಬೈ ವಿರುದ್ಧ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಕಳೆದ ಬಾರಿ ಗಾಯದ ಕಾರಣ ಕಣಕ್ಕಿಳಿಯದಿದ್ದ ರೋಹಿತ್ ಶರ್ಮಾ ಇಂದಿನ ಪಂದ್ಯದ ಮೂಲಕ ಮತ್ತೆ ಮುಂಬೈ ಇಂಡಿಯನ್ಸ್​ ತಂಡವನ್ನು ಮುನ್ನಡೆಸಲಿದ್ದಾರೆ.
ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಮುಂಬೈ ಪಾಲಿಗೆ ಮಹತ್ವದ್ದು ಎನಿಸಿಕೊಂಡಿದೆ. ಏಕೆಂದರೆ ದ್ವಿತಿಯಾರ್ಧದದ ಮೊದಲ ಪಂದ್ಯದಲ್ಲಿ ಮುಂಬೈ ಸಿಎಸ್​ಕೆ ವಿರುದ್ದ ಸೋಲುಂಡಿದೆ. ಇತ್ತ ಆರ್​ಸಿಬಿ ತಂಡವನ್ನು ಹೀನಾಯವಾಗಿ ಮಣಿಸುವ ಮೂಲಕ ಕೆಕೆಆರ್​ ಭರ್ಜರಿ ಜಯದೊಂದಿಗೆ ದ್ವಿತಿಯಾರ್ಧವನ್ನು ಆರಂಭಿಸಿದೆ.
ಮುಂಬೈ ಇಂಡಿಯನ್ಸ್​ ಆಡಿರುವ 8 ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ದಾಖಲಿಸಿ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಇತ್ತ ಕೆಕೆಆರ್ ತಂಡ ಆಡಿದ 8 ಪಂದ್ಯಗಳಲ್ಲಿ ಮೂರರಲ್ಲಿ ಮಾತ್ರ ಜಯ ಸಾಧಿಸಿದೆ. ಹೀಗಾಗಿ ಇಂದಿನ ಪಂದ್ಯದ ಫಲಿತಾಂಶವು ಕೆಕೆಆರ್ ತಂಡದ ಪ್ಲೇ ಆಫ್​ ಪ್ರವೇಶದ ಹಾದಿಯನ್ನು ನಿರ್ಧರಿಸಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ : ಶುಬ್ಮಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯಾನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಆ್ಯಂಡ್ರೆ ರಸೆಲ್, ಸುನಿಲ್ ನರೈನ್, ಲಾಕಿ ಫರ್ಗುಸನ್, ವರುಣ್ ಚಕ್ರವರ್ತಿ, ಪ್ರಸಿಧ್ ಕೃಷ್ಣ
ಮುಂಬೈ ಇಂಡಿಯನ್ಸ್ : ಕ್ವಿಂಟನ್ ಡಿ ಕಾಕ್ (ವಿಕೀ), ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಸೌರಭ್ ತಿವಾರಿ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಆಡಮ್ ಮಿಲ್ನೆ, ರಾಹುಲ್ ಚಹರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss