ಡೆಲ್ಲಿ ಕ್ಯಾಪಿಟಲ್ಸ್ ಗೆ ನೆಮ್ಮದಿಕೊಟ್ಟ ಕೋವಿಡ್ ಟೆಸ್ಟ್ ರಿಪೋರ್ಟ್: ಒಬ್ಬ ಔಟ್, ಉಳಿದವರು ಪಾಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್ ಕೊರೋನಾ ಸೋಂಕು ಇರುವುದು ಪತ್ತೆಯಾಗಿರುವ ಕಾರಣ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಎಲ್ಲಾ ಆಟಗಾರರನ್ನು ಕೊರೋನಾ ಟೆಸ್ಟ್​ಗೆ ಒಳಪಡಿಸಲಾಗಿತ್ತು.
ಇದೀಗ ರ್ಯಾಪಿಡ್​ ಟೆಸ್ಟ್​ನಲ್ಲಿ ಡೆಲ್ಲಿ ತಂಡದ ಆಲ್​​ರೌಂಡರ್ ಮಿಚೆಲ್ ಮಾರ್ಷ್​ ಅವರಿಗೆ ಕೊರೋನಾ ಇರುವುದು ದೃಢಪಟ್ಟಿದೆ. ಇದಾಗ್ಯೂ ಉಳಿದ ಎಲ್ಲಾ ಆಟಗಾರರ ವರದಿ ನೆಗೆಟಿವ್ ಬಂದಿದ್ದು, ಹೀಗಾಗಿ ಡೆಲ್ಲಿ ತಂಡದ ಆತಂಕ ದೂರವಾಗಿದೆ.
ಕೊರೋನಾ ಸೋಂಕಿಗೆ ಒಳಗಾಗಿರುವ ಫಿಸಿಯೋ ಫಾರ್ಹಾರ್ಟ್ ಐಸೊಲೇಟ್​ನಲ್ಲಿದ್ದಾರೆ. ಇದೀಗ ಮಿಚೆಲ್ ಮಾರ್ಷ್ ಅವರನ್ನು ಕೂಡ ಪತ್ಯೇಕವಾಗಿರಲಿಸಲಾಗಿದೆ.
ಸದ್ಯ ಮಿಚೆಲ್ ಮಾರ್ಷ್ ಅವರ ಆರ್‌ಟಿ-ಪಿಸಿಆರ್ ವರದಿಯುವ ಪಾಸಿಟಿವ್ ಇದ್ದು, ಹೀಗಾಗಿ ಒಂದು ವಾರಗಳ ಕಾಲ ಕ್ವಾರಂಟೈನ್​ನಲ್ಲಿರಬೇಕಾಗುತ್ತದೆ. ಮಾರ್ಷ್ ಹೊರತುಪಡಿಸಿ, ಎಲ್ಲಾ ಇತರ ಸದಸ್ಯರು ಆರ್‌ಟಿ-ಪಿಸಿಆರ್‌ಗೆ ನೆಗೆಟಿವ್ ಆಗಿರುವ ಕಾರಣ ಬುಧವಾರ ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್​ ನಡುವಿನ ಪಂದ್ಯವು ನಿಗದಿಯಂತೆ ಜರುಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here