JOB| ಕರ್ನಾಟಕ ಲೋಕಸೇವಾ ಆಯೋಗದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕರ್ನಾಟಕ ಲೋಕಸೇವಾ ಆಯೋಗವು 4 ತನ್ನ ಗಣಕಕೇಂದ್ರಕ್ಕೆ ಅಗತ್ಯ ಇರುವ ವಿವಿಧ ತಾಂತ್ರಿಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಖಾಲಿ ಹುದ್ದೆಗಳ ವಿವರ:

ಜೂನಿಯರ್ ಪ್ರೋಗ್ರಾಮರ್: 01
ಡಾಟಾ ಬೇಸ್ ಅಡ್ಮಿನ್ : 01
ನೆಟ್‌ವರ್ಕ್‌ ಅಡ್ಮಿನ್ : 01
ಹಾರ್ಡ್‌ವೇರ್ ಟೆಕ್ನೀಷಿಯನ್ : 01

ವಿದ್ಯಾರ್ಹತೆ:

ಕಂಪ್ಯೂಟರ್ ಸೈನ್ಸ್‌ / ಇನ್ಫಾರ್ಮೇಶನ್ ಸೈನ್ಸ್‌ / ಇನ್ಫಾರ್ಮೇಶನ್ ಟೆಕ್ನಾಲಜಿ / ಇಲೆಕ್ಟ್ರಾನಿಕ್ಸ್‌ ಅಂಡ್ ಕಂಮ್ಯುನಿಕೇಷನ್ / ಕಂಪ್ಯೂಟರ್ ಅಪ್ಲಿಕೇಶನ್ / ಎಂಎಸ್ಸಿ ಇನ್‌ ಇನ್ಫಾರ್ಮೇಶನ್ ಸೈನ್ಸ್‌ / ಟೆಕ್ನಾಲಜಿ/ ಕಂಪ್ಯೂಟರ್ ಸೈನ್ಸ್‌ ಇಂಜಿನಿಯರಿಂಗ್ ಅಥವಾ ಎಂಇ, ಎಂ.ಟೆಕ್‌ ವಿದ್ಯಾರ್ಹತೆ ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಕೌಶಲ್ಯ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ:

ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಗೆ ಅರ್ಜಿಯನ್ನು ಜುಲೈ 31,2023ರೊಳಗೆ ತಲುಪಿಸಬೇಕಿರುತ್ತದೆ. ಅರ್ಜಿಯ ಲಕೋಟೆಯ ಮೇಲೆ ಹುದ್ದೆಯ ಹೆಸರನ್ನು ನಮೂದಿಸತಕ್ಕದ್ದು. ಕಚೇರಿಯ ವಿಳಾಸ ಕೆಳಗಿನಂತಿದೆ.

ಕಚೇರಿಯ ವಿಳಾಸ:

ಶ್ರೀ ಸುರಳ್ಕರ್ ವಿಕಾಸ್ ಕಿಶೋರ್, ಭಾ.ಆ.ಸೇ, ಕಾರ್ಯದರ್ಶಿಗಳು, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು – 560001.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!