6 ಎಸೆತಗಳಲ್ಲಿ 6 ಸಿಕ್ಸ್!‌ ದೇಶಿಕ್ರಿಕೆಟ್‌ ನಲ್ಲಿ ಉದಯಿಸಿದ ಮತ್ತೊಬ್ಬ ನವತಾರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಯುವರಾಜ್‌ ಸಿಂಗ್‌, ಹರ್ಷಲ್‌ ಗಿಬ್ಸ್‌, ರವಿಶಾಸ್ತ್ರಿ ಕೀರನ್‌ ಪೊಲಾರ್ಡ್‌.. ಇವರೆಲ್ಲರೂ ಕ್ರಿಕೆಟ್‌ ನಲ್ಲಿ ದಿಗ್ಗಜ ಸಾಧಕರು. ಅಲ್ಲದೆ ಇವರುಗಳ ನಡುವೆ ಮತ್ತೊಂದು ಸಾಮ್ಯತೆಯುಂಟು.. ಇವರೆಲ್ಲರು 6 ಎಸೆತಗಳಲ್ಲಿ 6 ಸಿಕ್ಸ್‌ ಸಿಡಿಸಿದ ಖ್ಯಾತಿ ಹೊತ್ತವರು. ಇದೀಗ ದೇಶಿ ಕ್ರಿಕೆಟ್‌ ನಲ್ಲಿ 15 ವರ್ಷದ ಬಾಲಕನೊಬ್ಬ ಇದೇ ರೀತಿಯ ಸಾಧನೆ ಮಾಡಿ ಕ್ರೀಡಾಲೋಕವನ್ನು ಬೆರಗಾಗಿಸಿದ್ದಾನೆ.
ಪುದುಚೇರಿಯಲ್ಲಿ ನಡೆಯುತ್ತಿರುವ T10 ಪಂದ್ಯಾವಳಿಯಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿದ ಉದಯೋನ್ಮುಖ ಆಟಗಾರ ಕೃಷ್ಣ ಪಾಂಡೆ ಗಮನ ಸೆಳೆದಿದ್ದಾರೆ. ಪೇಟ್ರಿಯಾಟ್ಸ್ ಪರ ಕಣಕ್ಕಿಳಿದಿದ್ದ ಬಲಗೈ ಆಟಗಾರ ಈ ಅಪರೂಪದ ಸಾಧನೆ ಮಾಡಿದರು. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ಸದ್ದು ಮಾಡುತ್ತಿದೆ.
ರಾಯಲ್ಸ್ ವಿರುದ್ಧ 158 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಪೇಟ್ರಿಯಾಟ್ಸ್ ಐದು ಓವರ್‌ಗಳಲ್ಲಿ 41/1 ಗಳಿಸಿತ್ತು. ಆದರೆ, ಮುಂದಿನ ಓವರ್ ಪಂದ್ಯದ ಗತಿಯನ್ನು ಸಂಪೂರ್ಣವಾಗಿ ಬದಲಿಸಿತು. ಕೃಷ್ಣ ಪಾಂಡೆ ಆ ಓವರ್‌ನಲ್ಲಿ ಎದುರಾಳಿ ರಾಯಲ್ಸ್‌ ನ ವೇಗಿ ನಿತೇಶ್ ಠಾಕೂರ್ ಅವರ ಆರು ಎಸೆತಗಳಲ್ಲಿ ಆರು ಸಿಕ್ಸರ್‌ಗಳಿಗೆ ಸಿಡಿಸಿದರು. ಆ ಮೂಲಕ ಒಂದೇ ಓವರ್‌ನಲ್ಲಿ 36 ರನ್ ಗಳಿಸಿ ನೂತನ ದಾಖಲೆ ಬರೆದರು.

ಸ್ಫೋಟಕ ಬ್ಯಾಟಿಂಗ್‌ ನಡೆಸಿ ಪಾಂಡೆ ಕೇವಲ 19 ಎಸೆಗಳಲ್ಲಿ 12 ಸಿಕ್ಸರ್‌ ಹಾಗೂ ಎರಡು ಬೌಂಡರಿ ಸಿಡಿಸಿ 83 ರನ್‌ ಕಲೆಹಾಕಿದರು. ಈ ಮೂಲಕ ಟಿ10 ಕ್ರಿಕೆಟ್‌ ನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ವಿಶೇಷ ದಾಖಲೆಗೆ ಪಾತ್ರವಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!