45 ವರ್ಷಗಳ ಇತಿಹಾಸದಲ್ಲಿ ನೂತನ ದಾಖಲೆ ಬರೆಯಲು ರೆಡಿಯಾದ KRS

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಸದ್ಯ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಬೀಳುತ್ತಿರುವ ಕೆಆರ್‌ಎಸ್ ಅಣೆಕಟ್ಟು ಭರ್ತಿಯ ಅಂಚಿಗೆ ತಲುಪುತ್ತಿದೆ. ಈ ಸಂದರ್ಭದಲ್ಲಿ ಕನ್ನಂಬಾಡಿ ಕಟ್ಟೆ 45 ವರ್ಷಗಳ ಇತಿಹಾಸದಲ್ಲಿ ವಿಶೇಷ ದಾಖಲೆಯನ್ನು ಬರೆಯಲು ಕಾತುರದಲ್ಲಿದೆ.

ಪ್ರತಿವರ್ಷ ಕೆಆರ್‌ಎಸ್ ಡ್ಯಾಂ ಆಗಸ್ಟ್, ಸೆಪ್ಟೆಂಬರ್ ತಿಂಗಳಿನಲ್ಲಿ ಭರ್ತಿಯಾಗುತ್ತಿತ್ತು. ಆಗೊಮ್ಮೆ ಈಗೋಮ್ಮೆ ಜುಲೈ ತಿಂಗಳಿನಲ್ಲಿ ಭರ್ತಿಯಾಗಿರುವ ಒಂದೆರಡು ಉದಾಹರಣೆ ಇದೆ. ಆದರೆ ಈ ಬಾರಿ ಜೂನ್ ತಿಂಗಳಿನಲ್ಲಿ ಕೆಆರ್‌ಎಸ್ ಡ್ಯಾಂ ಭರ್ತಿಯಾಗುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ.

ಕೆಆರ್‌ಎಸ್ ಡ್ಯಾಂ ಭರ್ತಿಗೆ 9 ಅಡಿ ಅಂದ್ರೆ 12 ಟಿಎಂಸಿ ನೀರು ಅಷ್ಟೇ ಬೇಕಿರೋದು. ಹೀಗೆ ಮಳೆ ಬಿದ್ದರೆ ಕೆಆರ್‌ಎಸ್ ಡ್ಯಾಂ ಕೆಲ ದಿನಗಳಲ್ಲಿ ಭರ್ತಿಯಾಗಲಿದೆ. 1980 ರಿಂದ ಇಲ್ಲಿಯವರೆಗೆ ಜೂನ್ ತಿಂಗಳಿನಲ್ಲಿ ಕೆಆರ್‌ಎಸ್ ಡ್ಯಾಂ ಭರ್ತಿಯಾಗಿರುವ ಉದಾಹರಣೆಯೇ ಇಲ್ಲ. ಇದೇ ತಿಂಗಳು ಕೆಆರ್‌ಎಸ್ ಭರ್ತಿಯಾದ್ರೆ ದಾಖಲೆಯ ಪುಟಕ್ಕೆ ಕನ್ನಂಬಾಡಿ ಕಟ್ಟೆ ಸೇರಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

2 COMMENTS

  1. ನೀವು ಹೇಳುತ್ತಿರುವುದೇನೋ ನಿಜ ಆದರೆ ಕನ್ನಂಬಾಡಿ ಕಟ್ಟೆ ಕಟ್ಟಿಸಿದ ದಿನದಿಂದ ಸರಕಾರ ಅಥವಾ ಕಾವೇರಿ ನೀರಾವರಿ ನಿಗಮವಾಗಲಿ ಒಮ್ಮೆಯಾದರೂ ಹೂಲೆತ್ತಿಸುವ ಚಿಂತನೆ ಮಾಡಿದ್ದೀರಾ ಈಗ ದೊಡ್ಡದಾಗಿ ಬಡಾಯಿ ಜಂಬ ಕಿಚ್ಚಕೊಳ್ಳುತಿರುವಿರಿ ಮೊದಲು ಅನೇಕಟ್ಟೆಯನ್ನು ಒಮ್ಮೆ ದುರಸ್ತಿ ಮಾಡಿಸಿ ಕಾರಣ ಅರೆದ ಗಾರೆಯಿಂದ ಕಟ್ಟಿರುವ ಅನೇಕಟ್ಟಿದು ಈಗ ರಂತ್ರಜ್ಞಾನ ಮುಂದುವರೆದಿದೆ ವಾಟರ್ ಪ್ರೂಫ್ಯಿಂಗ್ ಕಾಂಪೌಂಡು ಅಲ್ಟ್ರಾಟೆಕ್ ಸಿಮೆಂಟು ಎಲ್ಲಾ ಬಂದಿದೆ ** ಇದು ಮಾಡ್ರೋ ಅಂದ್ರೆ ಬಿಟ್ಟು ಕಾವೇರಿ ಆರತಿ ಮಾಡ್ತಾರಂತೆ * ನಾಲಾಯಕ್ ಸರಕಾರದ ದುರಾಳಿಚಣೆಯುಳ್ಳ ಸಿ ಎಮ್ / ಡಿ ಸಿ ಎಮ್ / ಗಳು * ಸುಮಾರು ಹತ್ತು ಅಡಿಗಳಷ್ಟು ಹೂಳೆ ತುಂಬಿದೆ 😡😡😡

  2. ವಾಟರ್ ಬಿಲ್ ಜಾಸ್ತಿ ಮಾಡಿ, ಬಡವರ ಹೊಟ್ಟೆ ತುಂಬಲಿ. ಜಾಸ್ತಿ ಟ್ಯಾಕ್ಸ್ ಹಾಕಿ ಸರ್ಕಾರ ಮಾಡೋಕ್ಕೆ
    ಟ್ರಾಫಿಕ್ ಸಮಸ್ಯೆ ಸರಿ ಮಾಡಿ. ಸುರಂಗಮರ್ಗ ಬೇಡ.
    ಬಡವರು ಕೋಟ್ಯಂತ್ರ ಧುಡ್ಡು ಸುರದ್ದು ಸೈಟ್ ಕೊಂಡಿ, ಅರ್ಧಬಾರ್ದ ಮನೆ ಕಟ್ಟಿ ಅಂತೀರಲ್ಲ. ನೀವು ವಾಸಿಸುತೀರಾ? ಬಡವರ ಗೋಳು ತತ್ತದೆ ಇರೋಧು. ಯೋಚನೆ ಮಾಡಿ. ಲಕ್ಷ ಕೋತಿ ಆಸ್ತಿ ಇಧ್ರು ತಿನ್ನೋಧು ಮುಷ್ಟಿ ಅನ್ನ

LEAVE A REPLY

Please enter your comment!
Please enter your name here

error: Content is protected !!