ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ಕೇಂದ್ರ ಸರಕಾರದ ಬಜೆಟ್ 2022-23ರಲ್ಲಿ ಘೋಷಿಸಿರುವ ಮಾರ್ಚ್ 2023ರವರೆಗೆ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ECLGS) ಅನ್ನು ವಿಸ್ತರಿಸುವುದು, CGTMSE ಯೋಜನೆಯಡಿಯಲ್ಲಿ ಒಟ್ಟು ₹ 5 ಲಕ್ಷದವರೆಗೆ ಹೆಚ್ಚುವರಿ ₹ 50,000 ಕೋಟಿಗಳಷ್ಟು ಗ್ಯಾರಂಟಿ ಕವರ್ ಅನ್ನು ಹೆಚ್ಚಿಸುವುದು ಮುಂತಾದ ಕ್ರಮಗಳ ಮೂಲಕ ಸಾಂಕ್ರಾಮಿಕ ಪರಿಸ್ಥಿತಿಯಲ್ಲೂ ಎಂ.ಎಸ್.ಎಂ.ಇ.ಗಳ ಬೆಳವಣಿಗೆಯನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರಕಾರ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದೆ ಎಂದು ಕಾಸಿಯಾ (ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ) ಹೇಳಿದೆ.
ರಕ್ಷಣಾ ವಲಯದಲ್ಲಿ ದೇಶೀಯ ಉತ್ಪಾದನೆಯನ್ನು ಶೇ. 68ರಷ್ಟು ಕ್ಯಾಪೆಕ್ಸ್ ವೆಚ್ಚದವರೆಗೆ ಹೆಚ್ಚಿಸಿರುವುದು ಉತ್ತೇಜನಕಾರಕ ಎಂದು ಹೇಳಿರುವ ಕಾಸಿಯಾ, ಕೇಂದ್ರ ಸರಕಾರಕ್ಕೆ ಸಲ್ಲಿಸಿದ ತನ್ನ ಬಜೆಟ್ ಪೂರ್ವ ಜ್ಞಾಪಕ ಪತ್ರದಲ್ಲಿ ತಾನು ಮಾಡಿದ ಈ ಸಲಹೆಗಳನ್ನು ಸ್ವೀಕರಿಸಿದ್ದಕ್ಕಾಗಿ ಹಣಕಾಸು ಸಚಿವರಿಗೆ ಕೃತಜ್ಞತೆಯನ್ನು ಸಲ್ಲಿಸಿದೆ.
ಆದಾಗ್ಯೂ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ ಪ್ರಯೋಜನ ಪಡೆಯಲು ಅರ್ಹತಾ ಮಾನದಂಡಕ್ಕಾಗಿ ಪ್ರತ್ಯೇಕ ಮಾರ್ಗಸೂಚಿಗಳನ್ನು ರೂಪಿಸಬಹುದಿತ್ತು. ಉದ್ಯಮ, ಇ-ಶ್ರಮ್, ಎನ್‌ಸಿಎಸ್ ಮತ್ತು ಅಸೀಮ್‌ನಂತಹ ವಿವಿಧ ಪೋರ್ಟಲ್‌ಗಳ ಅಂತರ-ಸಂಪರ್ಕದಿಂದಾಗಿ ಎಂ.ಎಸ್.ಎಂ.ಇ.ಗಳು ಉತ್ತಮ ವ್ಯವಹಾರ ಮತ್ತು ಸುಲಭವಾದ ನಿಯಂತ್ರಕ ಅನುಸರಣೆಗಾಗಿ ಎದುರು ನೋಡಬಹುದು ಮತ್ತು ಅವುಗಳಲ್ಲಿರುವ ಡೇಟಾಬೇಸ್‌ಗಳು ಸಾಲ ಸೌಲಭ್ಯಕ್ಕಾಗಿ ಜಿ-ಸಿ, ಬಿ-ಸಿ, ಮತ್ತು ಬಿ-ಬಿ ಸೇವೆಗಳನ್ನು ಒದಗಿಸುತ್ತವೆ. ವಾಸ್ತವವಾಗಿ ಉದ್ಯಮಶೀಲತೆಯ ಅವಕಾಶಗಳನ್ನು ಹೆಚ್ಚಿಸುತ್ತದಲ್ಲದೇ ರೆಡ್-ಟೇಪಿಸಮ್ ಅನ್ನು ಕಡಿಮೆ ಮಾಡುತ್ತದೆ ಎಂದು ಭಾವಿಸುತ್ತೇವೆ. ಸಾಂಕ್ರಾಮಿಕದ ಬಿಕ್ಕಟ್ಟಿನಿಂದ ಎದುರಾಗುವ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಎಂ.ಎಸ್.ಎಂ.ಇ.ಗಳಿಗೆ ಶೇ. 4ರ ದರದಲ್ಲಿ ಲಘು ಸಾಲಗಳನ್ನು ವಿಸ್ತರಿಸುವ ನಮ್ಮ ಸಲಹೆಯನ್ನು ಪರಿಗಣಿಸಬಹುದಿತ್ತು ಎಂದು ಕಾಸಿಯಾ ತಿಳಿಸಿದೆ.
ಕೇಂದ್ರ ಸಚಿವಾಲಯಗಳಿಂದ ವಿಳಂಬವಾದ ಪಾವತಿಗಳನ್ನು ಕಡಿಮೆ ಮಾಡಲು ಮತ್ತು ಸರಬರಾಜುದಾರರಿಗೆ ಪರೋಕ್ಷ ವೆಚ್ಚವನ್ನು ಕಡಿಮೆ ಮಾಡಲು ಜಾಮೀನು ಬಾಂಡ್‌ಗಳನ್ನು ಪರಿಚಯಿಸಲು ಪ್ರಸ್ತಾಪಿಸಲಾದ ಆನ್‌ಲೈನ್ ಬಿಲ್ ವ್ಯವಸ್ಥೆಯು ಅದರ ಪರಿಣಾಮಕಾರಿತ್ವವನ್ನು ತೀವ್ರವಾಗಿ ಗಮನಿಸಲಾಗುವುದು ಎಂದು ಕಾಸಿಯಾ ತಿಳಿಸಿದೆ. ಕೆಲವು ಉತ್ಪನ್ನಗಳ ಮೇಲಿನ ಕಸ್ಟಮ್ ಸುಂಕ ಕಡಿತವನ್ನು ಸ್ವಾಗತಿಸುತ್ತದೆ ಎಂದಿದೆ.
ಆರ್‌ಬಿಐ ಹೊಸ ಡಿಜಿಟಲ್ ರೂಪಾಯಿಯನ್ನು ಪರಿಚಯಿಸುವುದರಿಂದ ವಹಿವಾಟು ವೆಚ್ಚದಲ್ಲಿ ಇಳಿಕೆಯಾಗುತ್ತದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ ಕಾಸಿಯಾವು, ರಾಷ್ಟ್ರೀಯ ಹೆದ್ದಾರಿಗಳು, ರೈಲು ಜಾಲ, ಕಾರ್ಗೋ ಟರ್ಮಿನಲ್‌ಗಳು ಮತ್ತು ಎಕ್ಸ್ಪ್ರೆಸ್‌ವೇಗಳ ಘೋಷಣೆಯನ್ನು ಶ್ಲಾಘಿಸಿದೆ.