ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿರಸಿಯಿಂದ ಬೆಳಗಾವಿಗೆ ತೇರಳುತ್ತಿದ್ದ ಕಣ್ಣಿಗೇರಿ ಸಮೀಪ ಕೆ ಎಸ್ ಆರ್ ಟಿ ಸಿ ಬಸ್ ಪಲ್ಟಿಯಾಗಿ ಚಾಲಕ ಸೇರಿದಂತೆ ಇಬ್ಬರಿಗೆ ಗಂಭೀರ ಗಾಯವಾಗಿದ್ದು ಇನ್ನುಳಿದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯವಾಗಿದ್ದು,ಯಲ್ಲಾಪುರ ತಾಲೂಕಸ್ಪತ್ರೆ ಯಲ್ಲಿ ದಾಖಲಿ ಸಲಾಗಿದೆ.
ಬಸ್ಸಿನಲ್ಲಿ ಶಿಕ್ಷಕರು,ವಿದ್ಯಾರ್ಥಿಗಳು ಸೇರಿದಂತೆ 40ಜನ ಪ್ರಯಾಣಿಕರಿದ್ದರು. ಹಳಿಯಾಳ ಸೇರೆದಂತೆ ಸಮೀಪದ ಎಲ್ಲರೂ ಬೇರೆ ಊರುಗಳಿಗೆ ವೃತ್ತಿ ನಿಮಿತ್ತ ತೆರಳುತ್ತಿದ್ದರು. ಬೆಳಗ್ಗೆ ಸುಮಾರು 8ಗಂಟೆಗೆ ಯಲ್ಲಾಪುರ ದಿಂದ ಹೊರಟಿದ್ದ ಬಸ್ಸ ಕಣ್ಣಿಗೇರಿ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿ ಮರಕ್ಕೆ ಡಿಕ್ಕಿ ಹೊಡೆದು, ಡಿಕ್ಕಿಯ ರಭಸಕ್ಕೆ ಮರವೇ ತುಂಡಾಗಿ ಬಿದ್ದಿದ್ದು,ಚಾಲಕ ಗಂಭೀರ ಗಾಯ ಗೊಂಡಿದ್ದಾನೆ.ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.