ಹೊಸದಿಗಂತ ಡಿಜಿಟಲ್ ಡೆಸ್ಕ್:
ಇದೇ ಪ್ರಪ್ರಥಮ ಬಾರಿಗೆ KSRTC ನಿಗಮ ಲಾರಿಗಳ ಖರೀದಿಗೆ ಮುಂದಾಗಿದೆ.
ಸಾರ್ವಜನಿಕ ಸೇವೆಯಲ್ಲಿ ಮೈಲಿಗಲ್ಲು ಸಾಧಿಸಿರೋ KSRTC ಈಗ ಲಾಜಿಸ್ಟಿಕ್ಸ್ ವಿಭಾಗದಲ್ಲೂ ತನ್ನ ಅದೃಷ್ಟ ಪರೀಕ್ಷೆಗೆ ಇಳಿದಿದೆ. ಆರಂಭಿಕ ಹಂತದಲ್ಲೇ 100 ಕೋಟಿ ಆದಾಯದ ನಿರೀಕ್ಷೆ ಇಟ್ಟಿರೋ ಇಲಾಖೆ, ಮುಂದಿನ ದಿನಗಳಲ್ಲಿ ಹೆಚ್ಚುವರಿ ಲಾರಿಗಳನ್ನು ಖರೀದಿ ಮಾಡೋ ಲೆಕ್ಕಾಚಾರವನ್ನೂ ಹೊಂದಿದೆ.
ನಿಗಮಕ್ಕೆ ವಾಣಿಜ್ಯ ಆದಾಯವನ್ನು ಹೆಚ್ಚಿಸಿಕೊಳ್ಳೋ ನಿಟ್ಟಿನಲ್ಲಿ ಲಾಜಿಸ್ಟಿಕ್ಸ್ ಸೇವೆ ಆರಂಭಿಸಲು ನಿರ್ಧರಿಸಿದೆ. ಯಾವ ರೀತಿ ಬಸ್‌ಗಳ ಸೇವೆಯನ್ನು ಇಡೀ ರಾಜ್ಯದಲ್ಲಿ ನೀಡಲಾಗ್ತಿದ್ಯೋ, ಅದೇ ಮಾದರಿಯಲ್ಲೇ ಲಾರಿಗಳ ಸೇವೆಯನ್ನೂ ಇಡೀ ರಾಜ್ಯಕ್ಕೆ ವಿಸ್ತರಿಸಲು ನಿರ್ಧರಿಸಿದೆ.
ಪೈಲಟ್ ಪ್ರಾಜೆಕ್ಟ್ ಆಗಿರೋ ಈ ಲಾಜಿಸ್ಟಿಕ್ಸ್ ಸೇವೆಯ ಮೇಲೆ ಇಲಾಖೆಗೆ ಹೆಚ್ಚಿನ ನಿರೀಕ್ಷೆಯಿದೆ. ಸಾಮಾನ್ಯವಾಗಿ ನಿಗಮಗಳ ಬಸ್‌ಗಳನ್ನು ಹೇಗೆ ಡಿಪೋಗಳಲ್ಲಿ ನಿರ್ವಹಿಸಲಾಗುತ್ತೋ, ಅದೇ ರೀತಿ ಈ ಲಾರಿಗಳನ್ನು ಕೂಡ ನಿರ್ವಹಿಸಲು ಯೋಜಿಸಲಾಗಿದೆ. ಲಾರಿಯೊಂದಕ್ಕೆ 17.03 ಲಕ್ಷದ ಥರ 3.4 ಕೋಟಿ ರೂಪಾಯಿ ವೆಚ್ಚದಲ್ಲಿ 20 ಲಾರಿಗಳನ್ನು ಖರೀದಿ ಮಾಡಲಾಗಿದೆ. ಪೂಣೆಯಲ್ಲಿ ಈಗಾಗಲೇ ಲಾರಿಗಳ ಬಾಡಿ ಬಿಲ್ಡಿಂಗ್ ಕಾಮಗಾರಿಯೂ ಆರಂಭವಾಗಿದ್ದು, ಕೆಲವೇ ದಿನಗಳಲ್ಲಿ ನೂತನ ಕೆಎಸ್‌ಆರ್‌ಟಿಸಿ ಲಾರಿಗಳು ನಮ್ಮ ರಾಜ್ಯಕ್ಕೆ ಆಗಮಿಸಲಿವೆ. .