ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ಷುಲ್ಲಕ ಕಾರಣಕ್ಕೆ ಅಂದ್ರ ಪ್ರದೇಶ ಸಾರಿಗೆ ಸಂಸ್ಥೆ ಬಸ್ ಚಾಲಕನ ಮೇಲೆ ಬೆಂಗಳೂರಿನಲ್ಲಿ ಕೆಎಸ್ ಆರ್ ಟಿ ಸಿ ಚಾಲಕ ಹಲ್ಲೆ ನಡೆಸಿದ್ದು, ಈ ಸಂಬಂಧ ಕೆಎಸ್‌ಆರ್‌ಟಿಸಿ ಚಾಲಕ ಅಮಾನತುಗೊಳಿಸಲಾಗಿದೆ.
ಬೆಂಗಳೂರು ಬಸ್ ನಿಲ್ದಾಣದಲ್ಲಿ ಚಾಲಕರ ನಡುವೆ ವಾಗ್ವಾಗ ಆರಂಭವಾಯಿತು. ಪ್ರೊದಟ್ಟೂರು ಡಿಪೋದ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಗುರುವಾರ ರಾತ್ರಿ 10:45 ರ ಸುಮಾರಿಗೆ ಈ ಘಟನೆ ನಡೆದಿದ್ದು, ಹಲ್ಲೆ ಮಾಡಿದ್ದ ಕೆಎಸ್ ಆರ್‌ಟಿಸಿ ಚಾಲಕ ಹನುಮಂತು ಬೆಲಿವಿಡಿ ಅವರನ್ನು ಅಮಾನತುಗೊಳಿಸಲಾಗಿದೆ.
ಕದಿರಿ ಡಿಪೋದ ಆರ್‌ಟಿಸಿ ಚಾಲಕ ಎನ್‌ಆರ್‌ಎಸ್ ರೆಡ್ಡಿ ತಮ್ಮ ಬಸ್ ಅನ್ನು ನಿಗದಿತ ಸ್ಥಳದಲ್ಲಿ ನಿಲ್ಲಿಸಿದ್ದರು. ಈ ವೇಳೆ ಹನುಮಂತು ತಪ್ಪು ಮಾರ್ಗದಿಂದ ಆ ಪ್ರದೇಶಕ್ಕೆ ಪ್ರವೇಶಿಸಿದ ಹಿನ್ನೆಲೆಯಲ್ಲಿ ಘರ್ಷಣೆ ಪ್ರಾರಂಭವಾಯಿತು. ಕದಿರಿ ಬಸ್ ತನ್ನ ದಾರಿಯನ್ನು ತಡೆಯುತ್ತಿದ್ದರಿಂದ ಸಿಟ್ಟಿಗೆದ್ದ ಹನುಮಂತು ಚಾಲಕನಿಗೆ ನಿಂದಿಸಿದ್ದಾರೆ. ಈ ವೇಳೆ ಕಡಪ ಮತ್ತು ಪ್ರೊದಟ್ಟೂರು ಆರ್‌ಟಿಸಿ ಚಾಲಕರು ಕದಿರಿ ಚಾಲಕನಿಗೆ ಬೆಂಬಲ ನೀಡಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.