ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಾವಣಗೆರೆಗೆ ನೇರ ಸಂಚಾರಕ್ಕಾಗಿ ಕೆಎಸ್ಆರ್ಟಿಸಿ ನೂತನ ಫ್ಲೈಬಸ್ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬುಧವಾರ ಚಾಲನೆ ನೀಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಐಎಬಿನಿಂದ ದಾವಣಗೆರೆಗೆ ಪ್ರತಿದಿನ ಎರಡು ಫ್ಲೈಬಸ್‌ಗಳು ಸಂಚರಿಸಲಿವೆ. ಈ ಬಸ್‌ಗಳು ತುಮಕೂರು ಮತ್ತು ಚಿತ್ರದುರ್ಗ ಬೈಪಾಸ್ ಮಾರ್ಗವಾಗಿ ಪ್ರಯಾಣಿಸಲಿವೆ ಎಂದು ಸಾರಿಗೆ ಇಲಾಖೆ ತಿಳಿಸಿದೆ. ಏರ್‌ಪೋರ್ಟ್‌ಗೆ ಬರುವ ಮತ್ತು ಏರ್ಪೋರ್ಟ್ನಿಂದ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಈ ನೂತನ ಫ್ಲೈಬಸ್ ಸೇವೆ ಆರಂಭಿಸಲಾಗಿದೆ.
ಈ ಬಸ್‌ಗಳಲ್ಲಿ ಶೌಚಾಲಯ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನೂ ಒದಗಿಸಲಾಗಿದೆ. ಇಲ್ಲಿಯವರೆಗೆ ಮೈಸೂರು, ಮಡಿಕೇರಿ, ಕುಂದಾಪುರ ಸೇರಿದಂತೆ ಕೆಲವು ನಗರಗಳಿಗೆ ಮಾತ್ರ ಫ್ಲೈಬಸ್ ಸೇವೆ ಲಭ್ಯವಿತ್ತು. ಈಗಿನಿಂದ ಹೆಚ್ಚುವರಿಯಾಗಿ ದಾವಣಗೆರೆಯತ್ತವೂ ನೇರ ಸಂಪರ್ಕ ಸಿಗಲಿದೆ.
ಬೆಂಗಳೂರು ಏರ್ಪೋರ್ಟ್-ದಾವಣಗರೆ ಮಧ್ಯೆ ಕೆಎಸ್ಆರ್ಟಿಸಿ ಫ್ಲೈಬಸ್ ಸೇವೆಗೆ ಚಾಲನೆ

