September 26, 2026
Saturday, September 26, 2026
spot_img

ಇಸ್ರೇಲ್‌-ಇರಾನ್‌ ಸಂಘರ್ಷ, ರಾಜಧಾನಿಯಲ್ಲಿ ಕಾಸ್ಟ್ಲಿ ಆಗಲಿದೆ ಡ್ರೈ ಫ್ರೂಟ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಣ ಪರಿಣಾಮದಿಂದ ರಾಜಧಾನಿ ಬೆಂಗಳೂರಿನಲ್ಲಿ ಡ್ರೈ ಫ್ರೂಟ್ಸ್‌ ಬೆಲೆ ದುಬಾರಿಯಾಗಲಿದೆ.

ಡ್ರೈ ಫ್ರೂಟ್ಸ್‌ ಪೂರೈಕೆಯಲ್ಲಿಯೂ ಸಮಸ್ಯೆಯಾಗಬಹುದು ಎಂದು ವ್ಯಾಪಾರಿಗಳು ಹೇಳ್ತಿದ್ದಾರೆ. ಹೆಚ್ಚಿನ ಪ್ರಮಾಣದ ಡ್ರೈ ಫ್ರೂಟ್ಸ್‌ ಇರಾನ್‌ನಿಂದ ಬರುತ್ತವೆ. ಆದರೆ ಸಂಘರ್ಷದಿಂದ ಸಾಗಣೆಯಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇದೆ.

ಇನ್ನು ರಂಜಾನ್‌ ಸಮಯವೂ ಹತ್ತಿರ ಬಂದಿದ್ದು, ಎಲ್ಲ ರೀತಿಯ ಡ್ರೈ ಫ್ರೂಟ್ಸ್‌ಗೆ ಬೇಡಿಕೆ ಹೆಚ್ಚಿದೆ. ಅದರಲ್ಲಿಯೂ ಖರ್ಜೂರಕ್ಕೆ ಬೇಡಿಕೆ ಜಾಸ್ತಿ ಇರುತ್ತದೆ. ಕೆಜಿಗೆ 300 ರೂ.ಗಳಂತೆ ಇವು ಮಾರಾಟವಾಗುತ್ತವೆ.

ಈಗಾಗಲೇ ವ್ಯಾಪಾರಿಗಳು ರಂಜಾನ್‌ ಎಂದು ಸಾಕಷ್ಟು ಡ್ರೈ ಫ್ರೂಟ್ಸ್‌ ಸ್ಟಾಕ್‌ನಲ್ಲಿ ಇಟ್ಟಿದ್ದಾರೆ. ಆದರೆ ಸಪ್ಲೇ ಕಡಿಮೆ ಆದರೆ ಇರುವ ಡ್ರೈ ಫ್ರೂಟ್ಸ್‌ನ ಬೆಲೆ ಜಾಸ್ತಿಯಾಗಲಿದೆ. ಪ್ರಸ್ತುತ ಬೆಂಗಳೂರಿನ ಮಾರುಕಟ್ಟೆಯಲ್ಲಿ ಇರಾನ್‌ನಿಂದ ಆಮದು ಆಗುವ ಪಿಸ್ತಾ ಕೆಜಿಗೆ 1,800 ರೂ.ನಿಂದ 2,100 ರೂ.ಗಳವರೆಗೆ ಮಾರಾಟವಾಗುತ್ತಿದೆ. ಅಂಜೂರ ಸುಮಾರು 1,600 ರೂ., ಮಾಮ್ರಾ ಬಾದಾಮಿ 2,500 ರೂ., ಪೈನ್ ಬೀಜಗಳು 8,000 ರೂ.ಗಳ ದರದಲ್ಲಿ ಮಾರಾಟವಾಗುತ್ತಿವೆ.

Must Read