ಹೊಸದಿಗಂತ ಡಿಜಿಟಲ್ ಡೆಸ್ಕ್
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯಲ್ಲಿ ಕೆಲಸ ಮಾಡುತ್ತಿರುವ 3,673 ಪೌರಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಿ ರಾಜ್ಯ ಸರ್ಕಾರವು ಅಧಿಕೃತ ಅಧಿಸೂಚನೆ ಹೊರಡಿಸಿದೆ.
3,673 ನೈರ್ಮಲ್ಯ ಕಾರ್ಮಿಕರನ್ನು ಕಾಯಂಗೊಳಿಸಲಾಗಿದ್ದು, ಪ್ರಸ್ತುತ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು ಸರ್ಕಾರದ ಅಡಿಯಲ್ಲಿ ₹17,000 ರಿಂದ ₹28,950 ರವರೆಗಿನ ವೇತನ ಶ್ರೇಣಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
“ಹೆಚ್ಚು ವರ್ಷಗಳ ಕಾಲ ಕೆಲಸ ಮಾಡಿದ ವ್ಯಕ್ತಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆದ್ಯತೆಯು ನೇರ ವೇತನ, ಕ್ಷೇಮಾಭಿವೃದ್ಧಿ ಅಥವಾ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ದಿನಗೂಲಿ, ಪಾವತಿಯ ದಾಖಲೆಗಳನ್ನು ಒದಗಿಸುವ ಕ್ರಮದಲ್ಲಿರುತ್ತದೆ. ಅವರು ಕನಿಷ್ಠ ಎರಡು ವರ್ಷಗಳವರೆಗೆ ಕೆಲಸ ಮಾಡಿದ ಮತ್ತು ವೇತನ ಪಡೆದಿದ್ದಕ್ಕಾಗಿ ಪುರಾವೆಗಳನ್ನು ಒದಗಿಸಬೇಕು, ”ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನೇತೃತ್ವದ ಎಂಟು ಸದಸ್ಯರ ಸಮಿತಿಯು ಒಟ್ಟು 18,000 ಪೌರಕಾರ್ಮಿಕರ ಪೈಕಿ 3,673 ಮಂದಿಯನ್ನು ಖಾಯಂ ಗೊಳಿಸಲು ಶಿಫಾರಸು ಮಾಡಿತ್ತು. ಕಾರ್ಮಿಕರಿಗೆ ಗರಿಷ್ಠ ವಯೋಮಿತಿಯನ್ನು 55 ವರ್ಷಗಳಿಗೆ ನಿಗದಿಪಡಿಸಲಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ