KCR ನಾಪತ್ತೆ ಹಿಂದೆ KTR ಸಂಚು: ಮತ್ತೆ ವಿವಾದ ಸೃಷ್ಟಿಸಿದ ತೆಲಂಗಾಣ ಸಚಿವೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಲಂಗಾಣ ಸಚಿವೆ ಕೊಂಡ ಸುರೇಖಾ, ಮಾಜಿ ಸಚಿವ ಕೆಟಿಆರ್ ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿದ್ದು, KCR ನಾಪತ್ತೆ ಹಿಂದೆ KTR ಸಂಚು ಇದೆ ಎಂದು ಆರೋಪಿಸಿದ್ದಾರೆ.

ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಕ್ಷೇತ್ರವಾದ ಗಜ್ವೆಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಕೊಂಡ ಸುರೇಖಾ, ಮಾಜಿ ಸಿಎಂ ಕೆ ಚಂದ್ರಶೇಖರ ರಾವ್ ಅವರು ಇತ್ತೀಚಿನ ದಿನಗಳಲ್ಲಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಅವರ ಪುತ್ರ ಕೆಟಿಆರ್ ಅಧಿಕಾರದಾಹಿಯಾಗಿದ್ದು, ತನ್ನ ಅಧಿಕಾರಕ್ಕಾಗಿ ತನ್ನ ತಂದೆಯನ್ನೇ ನಾಪತ್ತೆ ಮಾಡಿದ್ದಾರೆ. ಈ ಕುರಿತು ನಾಪತ್ತೆ ಪ್ರಕರಣ ದಾಖಲಿಸುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು.

ಇತ್ತೀಚೆಗಷ್ಟೇ ಚಂದ್ರಶೇಖರ್ ರಾವ್ ಅವರು ತಮ್ಮ ಪತ್ನಿ ಜನ್ಮದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಫೋಟೋಗಳನ್ನು ಬಿಆರ್ ಎಸ್ ಪಕ್ಷ ಬಿಡುಗಡೆ ಮಾಡಿದ ಬೆನ್ನಲ್ಲೇ ಕೊಂಡ ಸುರೇಖಾ ಈ ಹೇಳಿಕೆ ನೀಡಿದ್ದಾರೆ.

ಹತ್ತು ವರ್ಷ ಅಧಿಕಾರ ಅನುಭವಿಸಿದ ಕೆಟಿಆರ್ ಈಗ ಅಧಿಕಾರ ಕೈತಪ್ಪಿ ಏನು ಮಾಡುತ್ತಿದ್ದಾರೋ ಗೊತ್ತಿಲ್ಲದ ಪರಿಸ್ಥಿತಿಯಲ್ಲಿದ್ದಾರೆ. ಕೆಟಿಆರ್ ಮೂಸಿ ನಿವಾಸಿಗಳಿಗೆ ಪ್ರಚೋದನೆ ನೀಡುತ್ತಿರುವುದು ಏಕೆ? ಕಾಂಗ್ರೆಸ್ ತಂಟೆಗೆ ಬಂದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕೊಂಡ ಸುರೇಖಾ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗಷ್ಟೇ ಕೊಂಡ ಸುರೇಖಾ ಅವರು ನಟಿ ಸಮಂತಾ, ನಾಗ ಚೈತನ್ಯ ಕುರಿತು ಮಾತನಾಡಿ ವಿವಾದ ಸೃಷ್ಟಿಸಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here