ಹೊಸದಿಗಂತ ಡಿಜಿಟಲ್ ಡೆಸ್ಕ್:
ರಶ್ಮಿಕಾ ಮಂದಣ್ಣ ನಟನೆಯ ತಮಿಳು ಸಿನಿಮಾ ‘ಕುಬೇರ’ ರಿಲೀಸ್ಗೆ ರೆಡಿ ಇದೆ. ಈ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ನಟಿ ಈ ಚಿತ್ರದಲ್ಲಿ ಪಕ್ಕಾ ಡಿ ಗ್ಲಾಮ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಮಿಡಲ್ ಕ್ಲಾಸ್ ಹುಡುಗಿಯ ಪಾತ್ರ ಮಾಡಿದ್ದಾರೆ. ತೆಲುಗಿನ ನಾಗಾರ್ಜುನ, ತಮಿಳಿನ ಧನುಷ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.
ಸಿನಿಮಾ ಟೀಸರ್‌ನ್ನು ರಶ್ಮಿಕಾ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದಾರೆ. ಕೆಲವೇ ದಿನಗಳಲ್ಲಿ ನಿಮ್ಮನ್ನು ರಂಜಿಸೋಕೆ ಬರುತ್ತಿದ್ದೇವೆ ಎಂದು ಹೇಳಿದ್ದಾರೆ. ‘ಕುಬೇರ’ ಸಿನಿಮಾ ಹೆಸರಿಗೆ ತಕ್ಕಂತೆ ಹಣದ ಬಗ್ಗೆ, ಶ್ರೀಮಂತ ವ್ಯಕ್ತಿ ಬಗ್ಗೆ ಹೇಳುತ್ತಿರೋ ಕಥೆ. ಇದಕ್ಕೆ ಟೀಸರ್ನಲ್ಲಿ ಹಿಂಟ್ ಸಿಕ್ಕಿದೆ. ನಟ ಧನುಷ್ ಅವರು ಈ ಚಿತ್ರದಲ್ಲಿ ಬೀದಿ ಬದಿ ಆಯ್ದು ತಿನ್ನುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಉದ್ದನೆಯ ಗಡ್ಡ, ಹೊಲಸು ಬಟ್ಟೆ.. ಟೀಸರ್ ಉದ್ದಕ್ಕೂ ಅವರು ಬಹುತೇಕ ಹೀಗೆಯೇ ಕಾಣಿಸುತ್ತಾರೆ. ಟೀಸರ್ನಲ್ಲಿ ಕಥೆಯ ಬಗ್ಗೆ ಹಿಂಟ್ ಸಿಕ್ಕಿದೆಯಾದರೂ ಸ್ಪಷ್ಟವಾಗಿಲ್ಲ.