ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿಯ ಪ್ರಸಿದ್ಧವಾದ ಕಮಲಶಿಲೆಯ ಶ್ರೀ ಬ್ರಾಹ್ಮೀ ದುರ್ಗಾ ಪರಮೇಶ್ವರಿ ದೇವಾಲಯದೊಳಗೆ ಕುಬ್ಜಾ ನದಿ ನೀರು ಪ್ರವೇಶಿಸವಾಗಿದೆ.
ವರ್ಷಕ್ಕೊಮ್ಮೆ ಮಾತ್ರ ಈ ನೈಸರ್ಗಿಕ ಅಚ್ಚರಿ ನಡೆಯುತ್ತದೆ. ಕುಬ್ಜಾ ನದಿಯ ನೀರು ಗರ್ಭಗುಡಿಯೊಳಗೆ ಹರಿದು ದೇವಿಯ ಚರಣ ಸ್ಪರ್ಶ ಮಾಡಿದೆ.
ಇಂದುನಸುಕಿನ ನಾಲ್ಕು ಗಂಟೆಯ ಸುಮಾರಿಗೆ ನದಿ ನೀರು ಗರ್ಭಗುಡಿ ಪ್ರವೇಶಿಸುತ್ತಿದ್ದಂತೆಯೇ, ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಸಾಮಾನ್ಯವಾಗಿ, ಮಳೆಗಾಲದ ಸಮಯದ ಒಂದು ದಿನ, ನದಿ ನೀರು ಗರ್ಭಗುಡಿ ಪ್ರವೇಶಿಸಿ ದೇವರ ಚರಣ ಸ್ಪರ್ಷ ಮಾಡುವುದು ತಪ್ಪದೇ ನಡೆಯುತ್ತಿದೆ.
ಸಾಮಾನ್ಯವಾಗಿ, ಆರಿದ್ರಾ ಮಳೆಯ ವೇಳೆ ಕುಬ್ಜಾ ನದಿನೀರು ದೇವಾಲಯದ ಗರ್ಭಗುಡಿಯೊಳಗೆ ಪ್ರವೇಶಿಸಿ, ತಾಯಿಯ ಚರಣ ಸ್ಪರ್ಷ ಮಾಡಿ ಮತ್ತೆ ಇಳಿಮುಖವಾಗುತ್ತದೆ. ಭಕ್ತರು ಈ ವೇಳೆ, ದೇವಾಲಯದೊಳಗೆ ಪ್ರವೇಶಿಸಿದ ನದಿ ನೀರಿನಲ್ಲಿ ಪುಣ್ಯಸ್ನಾನ ಮಾಡುವುದು ವಾಡಿಕೆ.
ಗರ್ಭಗುಡಿಯೊಳಗೆ ನೀರು ಹರಿದು ಬರುತ್ತಿದ್ದಂತೆಯೇ, ದೇವಾಲಯದ ಅನುವಂಶಿಕ ಆಡಳಿತ ಧರ್ಮದರ್ಶಿಗಳಾದ ಸಚ್ಚಿದಾನಂದ ಚಾತ್ರ, ಸಿಬ್ಬಂದಿಗಳು, ಅರ್ಚಕರು, ಸ್ಥಳೀಯರು ಮತ್ತು ಭಕ್ತಾದಿಗಳ ಸಮ್ಮುಖದಲ್ಲಿ ಮಂಗಳಾರತಿ ನೆರವೇರಿಸಲಾಗಿದೆ.