August 31, 2026
Monday, August 31, 2026
spot_img

ನೀಲವಾಯ್ತು ಕುದುರೆಮುಖ! ನೀಲಕುರಿಂಜಿಯ ನೋಡಲು ಬಂದ ಪ್ರವಾಸಿಗರಿಗೆ ಮನವಿ ಮಾಡಿದ ಪ್ರವಾಸೋದ್ಯಮ ಇಲಾಖೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಶ್ಚಿಮ ಘಟ್ಟದ ಕುದುರೆಮುಖ ಹಾಗೇ ನೋಡೋದಕ್ಕೆ ಅಷ್ಟೊಂದು ಸುಂದರವಾಗಿದೆ. ಇನ್ನು ಈ ಕುದುರೆಮುಖ ನೀಲವಾಗಿದ್ದು, ಸಾವಿರಾರು ಪ್ರವಾಸಿಗಳು ಚಿಕ್ಕಮಗಳೂರಿನತ್ತ ಮುಖ ಮಾಡಿದ್ದಾರೆ.

ಕುದುರೇಮುಖ ಚಾರಣದ ಪ್ರದೇಶವೊಂದರ ದಾರಿಗಳಲ್ಲಿ ನೀಲಕುರಿಂಜಿ ಹೂವುಗಳು ಹಾಸಿಕೊಂಡಿದ್ದು, ಪ್ರವಾಸಿಗರು ಈ ಹೂವುಗಳನ್ನು ನೋಡೋದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದಾರೆ. ಇಲ್ಲಿಗೆ ಬರುವ ಜನರಿಗೆ ಪ್ರವಾಸೋದ್ಯಮ ಇಲಾಖೆ ಮನವಿಯೊಂದನ್ನು ಮಾಡಿದ್ದು, ಎಲ್ಲರೂ ಹೂವುಗಳನ್ನು ಮುಟ್ಟದೇ ಹಾಳುಮಾಡದೇ ದೂರದಲ್ಲೇ ನಿಂತು ಪ್ರಕೃತಿಯ ಸೌಂದರ್ಯವನ್ನು ಅನುಭವಿಸಿ ಎಂದು ಹೇಳಿದೆ.

ಈ ಹೂವುಗಳನ್ನು ವೀಕ್ಷಿಸಲು ಬರುವ ಪ್ರವಾಸಿಗರು ಹೂವುಗಳನ್ನು ಕೀಳದಂತೆ, ಗಿಡಗಳಿಗೆ ಹಾನಿ ಮಾಡದಂತೆ ಹಾಗೂ ಪರಿಸರದ ಸ್ವಚ್ಛತೆ ಕಾಪಾಡುವಂತೆ ಪ್ರವಾಸೋದ್ಯಮ ಇಲಾಖೆ ಮನವಿ ಮಾಡಿದೆ. ನೀಲಕುರಿಂಜಿಯಂತಹ ಅಪರೂಪದ ಹೂವುಗಳ ಅರಳುವಿಕೆ ಹಾಗೂ ಅವುಗಳ ಪರಿಸರ ಮಹತ್ವದ ಕುರಿತು ಪ್ರವಾಸಿಗರಿಗೆ ಸೂಕ್ತ ಮಾಹಿತಿ ಒದಗಿಸುವುದು, ನೈಸರ್ಗಿಕ ತಾಣಗಳಲ್ಲಿ ಜವಾಬ್ದಾರಿಯುತ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಹಾಗೂ ಪ್ರವಾಸಿಗರ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.

ಕುದುರೆಮುಖದ ಬೆಟ್ಟಗಳಲ್ಲಿ ಅರಳಿರುವ ನೀಲಕುರಿಂಜಿಯಂತಹ ಹೂವುಗಳು ಕರ್ನಾಟಕದ ಪ್ರಕೃತಿ ಸಂಪತ್ತಿನ ಅಪೂರ್ವ ಸೌಂದರ್ಯವನ್ನು ನಮಗೆ ಪರಿಚಯಿಸುತ್ತವೆ. ಇಂತಹ ನೈಸರ್ಗಿಕ ವಿಶೇಷತೆಗಳನ್ನು ವೀಕ್ಷಿಸಲು ತೆರಳುವ ಸಂಧರ್ಭದಲ್ಲಿ ಪರಿಸರ ಸ್ನೇಹೀ ಪ್ರವಾಸ ಕೈಗೊಳ್ಳಬೇಕು ಎಂದು ಹೇಳಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !