ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ: 48 ದಿನಗಳ ಸಂಧ್ಯಾ ಭಜನಾ ಸಂಕೀರ್ತನೆ ಉದ್ಘಾಟನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಂಗಳೂರು ಸಮೀಪದ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಪುನಃ ಪ್ರತಿಷ್ಠೆ-ಬ್ರಹ್ಮಕಲಶೋತ್ಸವ ಮೇ ತಿಂಗಳ 14 ರಿಂದ 24ರವರೆಗೆ ನಡೆಯಲಿದೆ. ಈ ಕಾರ್ಯಕ್ರಮದ ಅಂಗವಾಗಿ ಮಾರ್ಚ್ 28 ರಿಂದ ಆರಂಭಗೊಂಡಿದ್ದು, ಮೇ 14ರ ವರೆಗೆ 48 ದಿನಗಳ ಸಂಧ್ಯಾ ಭಜನಾ ಸಂಕೀರ್ತನೆ ನಡೆಯಲಿದೆ.

ಸಂಧ್ಯಾ ಭಜನಾ ಸಂಕೀರ್ತನೆಯು 48 ದಿನಗಳ ಕಾಲ 96 ಭಜನಾ ತಂಡಗಳಿಂದ ನಡೆಯಲಿದೆ. ಮೊದಲ ದಿನದ ಸಂಧ್ಯಾ ಭಜನಾ ಸಂಕೀರ್ತನೆಯು ಶ್ರೀಮತಿ ಮಂಜುಳಾ ಪ್ರಭಾಕರ್ ರಾವ್ ಉರ್ವ ರವರ ತಂಡದವರಿಂದ ನಡೆಯಿತು.
ಸಂಧ್ಯಾ ಭಜನಾ ಸಂಕೀರ್ತನೆಯನ್ನು ದೀಪ ಬೆಳಗಿಸಿ ಉದ್ಘಾಟಸಲಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿಯ ಅದ್ಯಕ್ಷರು ದಾಮೋದರ.ಎ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರು ಬಿ.ಪ್ರೇಮಾನಂದ ಕುಲಾಲ್ ಕೋಡಿಕಲ್, ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಬ್ರಹ್ಮಕಲಶೋತ್ಸವದ ವಿವಿಧ ಸಮಿತಿಗಳ ಪಧಾದಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!