ಹೊಸದಿಗಂತ ಡಿಜಿಟಲ್ ಡೆಸ್ಕ್ :
ಪಾಕಿಸ್ತಾನ-ಭಾರತ ನಡುವಣ ಏಷ್ಯಾಕಪ್ ಸೂಪರ್ 4 ಹಂತದ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದು ಅಗ್ರಸ್ಥಾನಕ್ಕೇರಿದೆ.
ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ ಹಾಗೂ ಕುಲ್ದೀಪ್ ಯಾದವ್ ಅದ್ಭುತ ಪ್ರದರ್ಶನ ನೀಡಿದ್ದಾರೆ.
ಕೊಹ್ಲಿ ಹಾಗೂ ರಾಹುಲ್ ಶತಕ ಬಾರಿಸಿದ್ರೆ ಕುಲ್ದೀಪ್ ಐದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಈ ಬಾರಿ ಕಿಂಗ್ ಕೊಹ್ಲಿಗೆ ನೀಡಿದ್ದಕ್ಕೆ ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ಅಡ್ಡಗಾಲು ಇಟ್ಟಿದ್ದಾರೆ. ವಿರಾಟ್ ಕೊಹ್ಲಿ ಬದಲು ಕುಲ್ದೀಪ್ ಪಂದ್ಯ ಶ್ರೇಷ್ಠ ಆಗಬೇಕಿತ್ತು ಎಂದಿದ್ದಾರೆ.
ನನ್ನ ಪ್ರಕಾರ ಶ್ರೇಷ್ಠ ಆಟಗಾರ ಕುಲ್ದೀಪ್,ಬೇರೆ ಆಯ್ಕೆಯ ಮಾತೇ ಇಲ್ಲ. ಪಾಕ್ ಬ್ಯಾಟರ್ ಗಳ ಹೆಡೆಮುರಿಕಟ್ಟಿದ್ದು ಕುಲ್ದೀಪ್ , ಐದು ವಿಕೆಟ್ ತೆಗೆಯೋದು ಸುಲಭದ ಮಾತಲ್ಲ ಎಂದಿದ್ದಾರೆ.