ಕುಂಭಮಾಸ ಪೂಜೆ: ಭಕ್ತರಿಗಾಗಿ ಮತ್ತೆ ತೆರೆದುಕೊಳ್ಳಲಿದೆ ಶಬರಿಮಲೆ ಸ್ವಾಮಿ ಸನ್ನಿಧಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಭಾರತ ಪ್ರಸಿದ್ಧ ಯಾತ್ರಾ ಸ್ಥಳವಾದ ಶಬರಿಮಲೆ ಸ್ವಾಮಿ ಸನ್ನಿಧಿಯ ಗರ್ಭಗುಡಿ ಕುಂಭಮಾಸ ಪೂಜೆಯ ಅಂಗವಾಗಿ ಫೆ. 13ರಂದು ತೆರೆದುಕೊಳ್ಳಲಿದೆ.

ಅಂದು ಸಂಜೆ ಐದು ಗಂಟೆಗೆ ತಂತ್ರಿವರ್ಯರಾದ ಕಂಠಾರರ್ ಮಹೇಶ್ ಮೋಹನ್ ಉಪಸ್ಥಿತಿಯಲ್ಲಿ ಮೇಲ್ಶಾಂತಿ ಪಿ.ಎನ್. ಮಹೇಶ್ ಗರ್ಭಗುಡಿಯ ಬಾಗಿಲು ತೆರೆದು ದೀಪ ಬೆಳಗಿಸಲಿದ್ದಾರೆ. ಫೆ.14ರ ಬೆಳಗ್ಗೆ 5:30ಕ್ಕೆ ಮಹಾಗಣಪತಿ ಹೋಮದೊಂದಿಗೆ ಇಲ್ಲಿ ಪೂಜೆಗಳು ಆರಂಭವಾಗಲಿದ್ದು, ಫೆ. 18ರವರೆಗೆ ಪ್ರತಿದಿನ ಉದಯಾಸ್ತಮಯ ಪೂಜೆ, ಪಡಿಪೂಜೆ, ಕಲಭಾಭಿಷೇಕ, ಪುಷ್ಪಾಭಿಷೇಕ, ಅಪ್ಪಾಭಿಷೇಕ ನಡೆಯಲಿದೆ.

ಈ ಅವಧಿಯಲ್ಲಿ ಭೇಟಿ ನೀಡುವ ಭಕ್ತರಿಗಾಗಿ ಫೆ.13 ರಂದು 30 ಸಾವಿರ, ಇತರ ದಿನಗಳಲ್ಲಿ 50 ಸಾವಿರ ಮಂದಿಗೆ ವರ್ಚುವಲ್ ಕ್ಯೂ ಮೂಲಕ ಬುಕ್ಕಿಂಗ್ ಲಭ್ಯವಿದೆ. ಸನ್ನಿಧಾನಕ್ಕೆ ಆಗಮಿಸುವ ಅಯ್ಯಪ್ಪ ಭಕ್ತರ ವಾಹನಗಳು ಸ್ಟ್ಯಾಂಡ್‌ನಲ್ಲಿ ನಿಲುಗಡೆ ಮಾಡಬೇಕಾಗಿದ್ದು, ಪಂಬಾದಲ್ಲಿ ಪಾರ್ಕಿಂಗ್ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!