144 ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳಕ್ಕೆ ಇಂದು ತೆರೆ, ಕೋಟ್ಯಂತರ ಜನರಿಂದ ಪುಣ್ಯಸ್ನಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ವಿಶ್ವದ ಅತಿದೊಡ್ಡ ಧಾರ್ಮಿಕ ಸಮಾವೇಶ ಮಹಾ ಕುಂಭಮೇಳ ಇಂದು ಅಂತ್ಯವಾಗಲಿದೆ. ಜನವರಿ 13 ರಿಂದ ಆರಂಭವಾಗಿದ್ದ ಈ ಧಾರ್ಮಿಕ ಹಬ್ಬ ಇಂದು ಶಿವರಾತ್ರಿಯೊಂದಿಗೆ ಅಂತ್ಯವಾಗಲಿದೆ.

ಈವರೆಗೂ 64 ಕೋಟಿ ಜನರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. ಹಲವು ಅಡೆತಡೆಗಳ ನಡುವೆ ಮಹಾ ಕುಂಭಮೇಳ ಹೊಸ ದಾಖಲೆ ಸೃಷ್ಟಿಸಿದೆ.

144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳ ಇಂದು ಮುಕ್ತಾಯವಾಗಲಿದೆ. ಪ್ರಪಂಚದಲ್ಲೇ ಇದೇ ಮೊದಲ ಬಾರಿಗೆ ಇಷ್ಟು ಜನ ಸೇರಿ ಹೊಸ ದಾಖಲೆ ನಿರ್ಮಾಣವಾಗಿದೆ. ಜೊತೆಗೆ ಶತಮಾನದಲ್ಲೇ ಅತ್ಯಂತ ಅಪರೂಪದ ಧಾರ್ಮಿಕ ಘಟನೆಯಾಗಿದ್ದು, ಇಂದು ಮಹಾಶಿವರಾತ್ರಿಯ ಅಂತಿಮ ಪುಣ್ಯ ಸ್ನಾನ ನಡೆಯುತ್ತಿದೆ.

ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ ಮಹಾಶಿವರಾತ್ರಿಯ ಶುಭದಿನವಾದ ಇಂದು ಕೋಟ್ಯಂತರ ಭಕ್ತರು ಇಂದು ಪುಣ್ಯಸ್ನಾನ ಮಾಡುತ್ತಿದ್ದಾರೆ. ಈ ಬಾರಿ ಮಹಾಶಿವರಾತ್ರಿಯ ಶುಭ ಸಮಯದಲ್ಲಿ ಭಕ್ತರು ಸಂಗಮದಲ್ಲಿ ಪವಿತ್ರ ಸ್ನಾನ ಶುರು ಮಾಡಿದ್ದಾರೆ. ಮಕರ ರಾಶಿಯಲ್ಲಿ ಚಂದ್ರನ ಸಂಚಾರದೊಂದಿಗೆ ಶಿವ ಭಕ್ತರು ಪರಿಘ ಯೋಗದ ಸಮಯದಲ್ಲಿ ಸಂಗಮದಲ್ಲಿ ಸ್ನಾನ ಮಾಡುವ ಮೂಲಕ ಕೊನೆಯ ಸ್ನಾನ ಮಹೋತ್ಸವದ ಪುಣ್ಯ ಗಳಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!