ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾ ಕುಂಭಮೇಳದ ಮೌನಿ ಅಮಾವಾಸ್ಯೆ ಪ್ರಯುಕ್ತ ಜನಪ್ರವಾಹ ಉಂಟಾಗಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ ನಾಲ್ವರ ಶವ ಇಂದು ಸಂಜೆ ವಿಮಾನದ ಮೂಲಕ ಬೆಳಗಾವಿಗೆ ಬರಲಿದೆ.
ಪ್ರಯಾಗ್‌ರಾಜ್‌ನಿಂದ ಬುಧವಾರ ರಾತ್ರಿಯೇ ಅಂಬುಲೆನ್ಸ್ ಮೂಲಕ ಶವಗಳು ಹೊರಟಿದ್ದು ಬೆಳಗ್ಗೆ ದೆಹಲಿ ತಲುಪಲಿದೆ. ಮಧ್ಯಾಹ್ನ 3:30ಕ್ಕೆ ದೆಹಲಿಯಿಂದ ಹೊರಟ ವಿಮಾನ ಸಂಜೆ 5:30ಕ್ಕೆ ಬೆಳಗಾವಿಗೆ ಬರಲಿದೆ.
ಒಂದು ಅಂಬುಲೆನ್ಸ್‌ನಲ್ಲಿ ಜ್ಯೋತಿ ಹತ್ತರವಾಠ (44) ಮತ್ತು ಮಗಳು ಮೇಘಾ ಹತ್ತರವಾಠ(24) ಅವರ ಶವ ಇದ್ದರೆ ಮತ್ತೊಂದು ಅಂಬುಲೆನ್ಸ್‌ನಲ್ಲಿ ಶೆಟ್ಟಿ ಗಲ್ಲಿಯ ಅರುಣ್ ಕೋಪರ್ಡೆ(61), ಶಿವಾಜಿನಗರದ ಮಹಾದೇವಿ ಬಾವನೂರ (48) ಮೃತದೇಹವಿದೆ. ಬೆಳಗಾವಿ ಡಿಸಿ ಮೊಹಮ್ಮದ್ ಅವರು ಶವ ಸುಗಮವಾಗಿ ನಗರಕ್ಕೆ ಬರಲು ಇಬ್ಬರು ವಿಶೇಷ ಅಧಿಕಾರಿಗಳನ್ನು ದೆಹಲಿಗೆ ಕಳುಹಿಸಿದ್ದಾರೆ.