ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಈಗಾಗಲೇ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ರಾಜಧಾನಿ ಬೆಂಗಳೂರಿಗೂ ನೀರಿನ ಸಮಸ್ಯೆ ಎದುರಾಗಿದೆ.
ಬೋರ್‌ವೆಲ್‌ಗಳಲ್ಲಿ ನೀರಿಲ್ಲ, ಕಾವೇರಿ ನೀರು ಬರುತ್ತಿಲ್ಲ, ಟ್ಯಾಂಕರ್ ನೀರಿನ ಬೆಲೆ ದುಬಾರಿ, ಇನ್ನಿತರ ಕಾರಣಗಳಿಂದಾಗಿ ನೀರಿನ ಕೊರತೆ ಎದುರಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚಿನ ಮಂದಿ ಶುದ್ಧ ನೀರಿನ ಘಟಕಗಳಿಂದಲೇ ಮನೆಗೆ ನೀರು ತರುತ್ತಾರೆ. ಐದು ರೂಪಾಯಿ ಕಾಯಿನ್ ಹಾಕಿ ತಮಗೆ ಬೇಕಿರುವಷ್ಟು ನೀರು ತೆಗೆದುಕೊಂಡು ಹೋಗುತ್ತಾರೆ.
ಆದರೆ ಇದೀಗ ಕುಡಿಯುವ ನೀರಿನ ಕೊರತೆಯಿಂದಾಗಿ ಒಬ್ಬರಿಗೆ ಒಂದೇ ಕ್ಯಾನ್ ಎನ್ನುವ ಹೊಸ ನಿಯಮ ಜಾರಿಯಾಗಿದೆ. ಬೆಂಗಳೂರಿನ ಕೆಲವು ಏರಿಯಾಗಳ ಶುದ್ಧ ಕುಡಿಯುವ ನೀರಿನ ಘಟಕಗಳ ಮುಂದೆ ಒಬ್ಬರಿಗೆ ಒಂದೇ ಕ್ಯಾನ್ ಎನ್ನುವ ಬೋರ್ಡ್ ಹಾಕಲಾಗಿದೆ.
ಇದರಿಂದಾಗಿ ನಿವಾಸಿಗಳು ಪರದಾಡುತ್ತಿದ್ದಾರೆ. ಒಂದು ಕ್ಯಾನ್ ನೀರಿಗಾಗಿ ಕ್ಯೂ ನಿಲ್ಲಬೇಕಿದೆ. ಜೊತೆಗೆ ತಮ್ಮ ಮನೆಯವರನ್ನು ಕರೆದುಕೊಂಡು ಬಂದು ಎಲ್ಲರೂ ಒಂದೊಂದು ಕ್ಯಾನ್ ನೀರು ಹೊತ್ತೊಯ್ಯುವ ಕೆಲಸವನ್ನೂ ಮಾಡುತ್ತಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಸಮಸ್ಯೆ ತಪ್ಪಿದ್ದಲ್ಲ.