ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಳ್ಯದ ಅಭಿವೃದ್ಧಿ ಬಗ್ಗೆ ಈ ಹಿಂದೆ ಹೊಗಳುತ್ತಿದ್ದ ಅಶೋಕ್ ರೈ ಇಂದು ಕಾಂಗ್ರೆಸ್ ಸೇರ್ಪಡಗೊಂಡು ಶಾಸಕರಾಗಿ ಸುಳ್ಯದಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ಹೇಳುತ್ತಿರುವುದು ಅವರ ಜ್ಞಾನದ ಕೊರತೆ ಎಂದು ಸುಳ್ಯ ಶಾಸಕಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸುಳ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕುರಿತು ಇತ್ತೀಚಿಗೆ ಪುತ್ತೂರು ಶಾಸಕ ಅಶೋಕ್ ರೈ ಸುಳ್ಯದಲ್ಲಿ ನೀಡಿದ ಹೇಳಿಕೆಗೆ ತೀವ್ರವಾಗಿ ಖಂಡಿಸುತ್ತೇನೆ ಹಾಗೂ ಅವರಿಗೆ ಸುಳ್ಯದ ಅಭಿವೃದ್ಧಿ ಈ ಹಿಂದೆ ಕಾಣಿಸಿದ್ದು ಇದೀಗ ಕಾಣಿಸುತ್ತಿಲ್ಲ ಅಷ್ಟೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಳ್ಯದಲ್ಲಿ ಅಭಿವೃದ್ಧಿಯಾಗಿಲ್ಲ ಎನ್ನುವ ಶಾಸಕರೇ ಸುಳ್ಯಕ್ಕೆ ಒಮ್ಮೆ ಬಂದು ನೋಡಿ ಈ ಹಿಂದೆ ಶಾಸಕ ಸಚಿವರಾಗಿ ಕೆಲಸ ನಿರ್ವಹಿಸಿದ ಎಸ್ ಅಂಗಾರ , ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ಇವರ ಅವಧಿಯಲ್ಲಿ ಆದ ಅಭಿವೃದ್ಧಿ ಹಾಗೂ ಇದೀಗ ನನ್ನ ಹಾಗೂ ಸಂಸದ ಬೃಜೇಶ್ ಚೌಟ ನೇತೃತ್ವದಲ್ಲಿ ಅಭಿವೃದ್ಧಿಗೆ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಮುಂದು ವರೆಸುತ್ತಿದ್ದೇವೆ. ಸುಳ್ಯ ತಾಲೂಕಿನಲ್ಲಿ ಅಂಬೆಡ್ಕರ್ ಭವನಕ್ಕೆ ನಿಮ್ಮ ಹಣ ನಮಗೆ ಬೇಕಾಗಿಲ್ಲ ನಾನು ಸರಕಾರಕ್ಕೆ ಕಳುಹಿಸಲಾಗಿದ್ದು ನಾನು ಸಚಿವರು ಮುಖ್ಯಮಂತ್ರಿಗಳ ಬಳಿಗೆ ತೆರಳಿದಾಗ ಪಕ್ಕದಲ್ಲಿ ನೀವು ಅರ್ಜಿಗಳನ್ನು ಹಿಡಿದು ನಿಂತಿದ್ದದ್ದನ್ನು ನಾನು ನೋಡಿದ್ದೇನೆ ನೀವು ಪುತ್ತೂರಿಗೆ ಎಷ್ಟು ಅನುದಾನ ತಂದಿದ್ದೀರಿ ನೀವು ಇಂದು ಉದ್ಘಾಟನೆ ಮಾಡುತ್ತಿರುವುದು ಈ ಹಿಂದಿನ ಬಿಜೆಪಿ ಸರಕಾರ ಹಾಗೂ ಬಿಜೆಪಿ ಶಾಸಕರ ಅವಧಿಯಲ್ಲಿ ಬಂದ ಅನುದಾನಗಳ ಕಾಮಗಾರಿ ಅಷ್ಟೇ ನೀವು ತಂದ ಅಭಿವೃದ್ಧಿ ಕೆಲಸಗಳನ್ನು ತೋರಿಸಿ ಎಂದು ಸವಾಲು ಎಸೆದರು.
ಸುಳ್ಯದಲ್ಲಿ ಕಿರು ಡ್ಯಾಂ , ಪಾಲೋಲಿ ಸೇತುವೆ , ಸುಬ್ರಹ್ಮಣ್ಯ ಸೇತುವೆ ಕೊಯಿಲ ಪಶು ಆಸ್ಪತ್ರೆ ಸೇರಿದಂತೆ ಎಲ್ಲವು ಮಾಡಿದ್ದೇವೆ. ಅಲ್ಲದೇ ಸುಳ್ಯದ ಅಂಬೆಡ್ಕರ್ ಭವನಕ್ಕೆ ಕಾಂಗ್ರೆಸ್ ಸರಕಾರ 3.10 ಲಕ್ಷ ಅನುದಾನ ಬಿಡುಗಡೆ ಆಗದೆ ಉಳಿಕೆಯಾಗಿದೆ ಅದನ್ನು ಬಿಡುಗಡೆ ಮಾಡಬೇಕಿದೆ ಈಗಿನ ಸರಕಾರ ಹಾಗೂ ನಿಮ್ಮಲ್ಲಿ ಅಂಬೆಡ್ಕರ್ ಭವನ ನಿರ್ಮಿಸಿದ್ದು ಬಿಜೆಪಿ ಶಾಸಕರಾಗಿದ್ದ ಸಂಜೀವ ಮಠಂದೂರು , ಮಲ್ಲಿಕ ಪ್ರಸಾದ್ , ಶಕುಂತಲಾ ಶೆಟ್ಟಿ ಬಿಜೆಪಿಯಲ್ಲಿ ಇದ್ದ ಅವಧಿಯಲ್ಲಿ ಎಂದು ಅಶೋಕ್ ರೈ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು ಸುದ್ದಿಗೋಷ್ಟಿಯಲ್ಲಿ ಪ್ರಮುಖರಾದ ಹರೀಶ್ ಕಂಜಿಪಿಲಿ , ರಾಕೇಶ್ ರೈ ಕೆಡೆಂಜಿ , ಶಶಿಕಲಾ ಎ ನೀರಬಿದರೆ , ವಿನಯ ಕುಮಾರ್ ಕಂದಡ್ಕ , ಸುಬೋದ್ ಶೆಟ್ಟಿ ಮೇನಾಲ , ಎ ಟಿ ಕುಸುಮಾಧರ , ನಾರಾಯಣ ಎಸ್ ಎಮ್ ಉಪಸ್ಥಿತರಿದ್ದರು.