ಪಾಕ್‌ ಆಕ್ರಮಣಕಾರರಿಂದ ನುಬ್ರಾ ಕಣಿವೆಯನ್ನು ರಕ್ಷಿಸಿದ ಲಡಾಖಿ ವೀರ!

ತ್ರಿವೇಣಿ ಗಂಗಾಧರಪ್ಪ

1948 ರಲ್ಲಿ ಪಾಕಿಸ್ತಾನದ ಆಕ್ರಮಣಕಾರರು ಲಡಾಖ್ ಮೇಲೆ ದಾಳಿ ಮಾಡಿದಾಗ, ಈ ಪ್ರದೇಶವು ಭಾರತೀಯ ಪ್ರದೇಶದ ಭಾಗವಾಗಿ ಉಳಿಯುವಂತೆ ನೋಡಿಕೊಳ್ಳುವಲ್ಲಿ ಅನೇಕ ಸ್ಥಳೀಯ ನಾಗರಿಕರು ನಿರ್ಣಾಯಕ ಪಾತ್ರ ವಹಿಸಿದರು. ಕರ್ನಲ್ ಚೆವಾಂಗ್ ರಿಂಚೆನ್ (ಎರಡು ಬಾರಿ ಮಹಾವೀರ ಚಕ್ರ ಪ್ರಶಸ್ತಿ ಪುರಸ್ಕೃತರು), ಕುಶೋಕ್ ಬಕುಲಾ ರಿಂಪೋಚೆ, ಸೋನಮ್ ನಾರ್ಬು ಮತ್ತು ಅಸಂಖ್ಯಾತ ಇತರ ಲಡಾಖಿ ಕಾರ್ಯಕರ್ತರು, ಸ್ವಯಂಸೇವಕರು ಮತ್ತು ಕುಟುಂಬಗಳು ಭಾರತದ ಉದ್ದೇಶಕ್ಕೆ ನೀಡಿದ ಕೊಡುಗೆಗಳನ್ನು ಎಂದಿಗೂ ಮರೆಯಬಾರದು.

ಈ ನಿಟ್ಟಿನಲ್ಲಿ ಇತಿಹಾಸದ ಪುಟಗಳಲ್ಲಿ ಅತೀ ಕಡಿಮೆ ತಿಳಿದಿರುವ ಮತ್ತೊಬ್ಬ ವ್ಯಕ್ತಿ ಎಲಿಯಾಹ್ ತ್ಸೆಟಾನ್ ಫಂಟ್ಸಾಗ್. ನುಬ್ರಾದಲ್ಲಿ ನೇಮಕಗೊಂಡ 2 ನೇ ಡೋಗ್ರಾ ಬೆಟಾಲಿಯನ್‌ನ ಸಿವಿಲ್ ಅಧಿಕಾರಿ. ಸರ್ಕಾರಿ ಸೇವೆಯಲ್ಲಿನ ತನ್ನ ಅವಧಿಯನ್ನು ಅನುಸರಿಸಿ, ತ್ಸೆಟಾನ್ ಫಂಟ್ಸಾಗ್ ಅವರು ಟಿಬೆಟಿಯನ್ ನಿರಾಶ್ರಿತರ ಮಕ್ಕಳಿಗಾಗಿ ಡೆಹ್ರಾಡೂನ್ ಬಳಿಯ ರಾಜ್‌ಪುರದಲ್ಲಿ ಶಾಲೆಯನ್ನು ಸ್ಥಾಪಿಸಿದರು.

ವಿಭಜನೆಯ ಸಮಯದಲ್ಲಿ, ಲಡಾಖ್ ಅನ್ನು ಜಮ್ಮು ಮತ್ತು ಕಾಶ್ಮೀರ ರಾಜ್ಯ ಪಡೆಗಳು ಕಾವಲು ಕಾಯುತ್ತಿದ್ದವು. ಆದಾಗ್ಯೂ, ಭಾರತವು ಪ್ರತಿಕ್ರಿಯಿಸುವ ಮೊದಲೇ, ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಮೇಲೆ ತನ್ನ ದಾಳಿಯನ್ನು ಪ್ರಾರಂಭಿಸಿ ಗಿಲ್ಗಿಟ್ ಅನ್ನು ವಶಪಡಿಸಿಕೊಂಡಿತ್ತು. ಕಾರ್ಗಿಲ್ ಮತ್ತು ಡ್ರಾಸ್ ಪಟ್ಟಣಗಳನ್ನು ಮೇ 1948 ರ ಅಂತ್ಯದಲ್ಲಿ ವಶಪಡಿಸಿಕೊಳ್ಳಲಾಯಿತು ಮತ್ತು ಲೇಹ್‌ಗೆ ಹೋಗುವ ಮಾರ್ಗವನ್ನು ಕಾವಲು ಕಾಯುತ್ತಿದ್ದ ಸ್ಕರ್ಡು ಅಂತಿಮವಾಗಿ ಆಗಸ್ಟ್ 14, 1948 ರಂದು ಬೇಸರದ ಹೋರಾಟದ ನಂತರ ಪತನವಾಯಿತು.

ಲೇಹ್ ಪತನವು ಭಾರತಕ್ಕೆ ಕಾರ್ಯತಂತ್ರದ ಹೊಡೆತವಾಗಿತ್ತು. ಈ ಆಲೋಚನೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ಪಾಕಿಸ್ತಾನಿಗಳು ಈಗಾಗಲೇ ನಿರ್ಣಾಯಕ ಝೋಜಿಲಾ ಪಾಸ್ ಅನ್ನು ನುಸುಳಿದ್ದರು. ಇದನ್ನು ಪರಿಣಾಮಕಾರಿಯಾಗಿ ಹಮ್ಮೆಟ್ಟಿಸಿದ ಭಾರತೀಯ ಪಡೆಗಳ ಸಣ್ಣ ಗುಂಪಿನಿಂದ ರಕ್ಷಿಸಲಾಯಿತು.

ಈ ಸಮಯದಲ್ಲಿ, ಸ್ಥಳೀಯ ನಾಗರಿಕರು ಲಡಾಖ್ ಅನ್ನು ಪಾಕಿಸ್ತಾನದ ಭಾಗವಾಗದಂತೆ ರಕ್ಷಿಸಲು ಸಹಾಯ ಮಾಡಿದರು. 1908 ರಲ್ಲಿ ಸಬೂ ಪಟ್ಟಣದಲ್ಲಿ ಜನಿಸಿದ ತ್ಸೆಟಾನ್ ಫುಂಟ್ಸಾಗ್ ಬಹಳ ವಿಶೇಷವಾದ ಪಾಲನೆಯನ್ನು ಹೊಂದಿದ್ದರು. ಶ್ರೀಮಂತ ಕುಟುಂಬದಿಂದ ಬಂದವರು, ಹಿಂದೆ ಲಡಾಖ್‌ನ ರಾಜನಿಗೆ ಕಾಲೋನ್‌ಗಳನ್ನು (ಮಂತ್ರಿಗಳನ್ನು) ತಯಾರು ಮಾಡಿ ಕೊಟ್ಟಿದ್ದರು. ಅವರ ತಂದೆ ಪ್ರಖ್ಯಾತ ರೈಜಾಂಗ್ ಮಠದ ಪ್ರಮುಖ ಶಿಷ್ಯರಲ್ಲಿ ಒಬ್ಬರಾಗಿದ್ದರು.

ಸರ್ಕಾರಿ ಸೇವೆಗೆ ಸೇರಿದ ನಂತರವೂ, ಫುಂಟ್ಸಾಗ್ ಬೌದ್ಧ ಅಧ್ಯಯನಗಳೊಂದಿಗೆ ಸಂಪರ್ಕವನ್ನು ಕಳೆದುಕೊಳ್ಳಲಿಲ್ಲ ಮತ್ತು ಧಾರ್ಮಿಕ ಗ್ರಂಥಗಳ ಜ್ಞಾನವನ್ನು ಹೊಂದಿದ್ದರು. 1920ರ ದಶಕದ ಉತ್ತರಾರ್ಧದಲ್ಲಿ ಟಿಬೆಟಿಯನ್ ಭಾಷೆಯಲ್ಲಿ ಬೈಬಲ್ ಬರೆಯಲು ತೀರ್ಮಾನಿಸಿದರು. ಲಡಾಖಿ ಕ್ರಿಶ್ಚಿಯನ್ ವಿದ್ವಾಂಸರಾದ ಜೋಸೆಫ್ ಗೆರ್ಗನ್ ಅವರನ್ನು ಭೇಟಿಯಾದಾಗ ಅವರ ಜೀವನವು ತೀವ್ರವಾಗಿ ಬದಲಾಗುತ್ತದೆ.

ಅಪರಾಧಗಳ ತನಿಖೆ ಅಥವಾ ಟಿಬೆಟಿಯನ್ ಅಧಿಕಾರಿಗಳೊಂದಿಗೆ ಕೆಲವು ಗಡಿ ವಿವಾದಗಳಂತಹ ವಿವಿಧ ಕಾರ್ಯಯೋಜನೆಗಳ ಮೇಲೆ ಫುಂಟ್ಸಾಗ್ ಅನ್ನು ಟಿಬೆಟ್‌ಗೆ ಹಲವು ಬಾರಿ ಕಳುಹಿಸಲಾಗಿದೆ.ಆತನ ಮತಾಂತರಗೊಳ್ಳುವ ನಿರ್ಧಾರವು ಬೌದ್ಧ ಸಮುದಾಯವನ್ನು ದೊಡ್ಡ ಪ್ರಮಾಣದಲ್ಲಿ ಕೋಪಗೊಳಿಸಿದ್ದಲ್ಲದೆ ಸ್ವಂತ ಕುಟುಂಬವು ಅವನ ಆಸ್ತಿಯನ್ನು ಕಸಿದುಕೊಂಡಿತು. ಸ್ಥಳೀಯ ತಹಸೀಲ್ದಾರ್ ಕಾಶ್ಮೀರಿ ಸರ್ಕಾರದಿಂದ 26 ರೂಪಾಯಿಗಳನ್ನು ಕದ್ದಿದ್ದಾರೆ ಎಂದು ಸುಳ್ಳು ಆರೋಪ ಹೊರಿಸಿ ಜೈಲಿಗೆ ಹಾಕಿದರು. ಅದೃಷ್ಟವಶಾತ್, ಆರೋಪಗಳು ಸುಳ್ಳು ಎಂದು ಸಾಬೀತಾದ ನಂತರ ಅವರನ್ನು ಬಿಡುಗಡೆ ಮಾಡಲಾಯಿತು ಮತ್ತು 1940 ರಲ್ಲಿ ಸರ್ಕಾರಿ ಸೇವೆಗೆ ಮರಳಿದರು.

ಬುಡಕಟ್ಟು ದಾಳಿಕೋರರು ಸ್ಕಾರ್ಡು ಮೇಲೆ ದಾಳಿ ಮಾಡಿದಾಗ, ಫುಂಟ್ಸಾಗ್ ಲಡಾಖ್‌ಗೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು, ಅಲ್ಲಿ ಅವರು ಭಾರತೀಯ ಸೇನೆಯ ಪೂರೈಕೆ ಅಧಿಕಾರಿಯಾಗಿ ಕೆಲಸ ಮಾಡಿದರು. ಫುಂಟ್ಸಾಗ್ ನುಬ್ರಾ ಕಾರ್ಯಾಚರಣೆಗಳ ಮುಖ್ಯ ಸಿವಿಲ್ ಫೋರ್ಸ್ ಸಂಘಟಕರಾಗಿದ್ದರು. ಪೃಥಿ ಚಂದ್ ಅವರೊಂದಿಗೆ ನಿಕಟ ಸಮನ್ವಯದಲ್ಲಿ ಇದ್ದು, ಸ್ಥಳೀಯ ಜನರಿಂದ ಚಂದ್‌ಗೆ ಅಗತ್ಯವಿರುವ ಎಲ್ಲಾ ಸಹಾಯವನ್ನು ಫುಂಟ್ಸಾಗ್ ನೀಡುವಲ್ಲಿ ಯಶಸ್ವಿಯಾದರು. ಬಂದೂಕುಗಳು ಮತ್ತು ಮದ್ದುಗುಂಡುಗಳ ಪೂರೈಕೆಗಾಗಿ ಕಾಲೋನ್ ಚೆವಾಂಗ್ ರಿಗ್ಜಿನ್ ಜೊತೆಗೆ ಚೆವಾಂಗ್ ರಿಂಚೆನ್ ಅವರಂತಹ ಕೆಚ್ಚೆದೆಯ ಸ್ವಯಂಸೇವಕರು ಕಾರ್ಯನಿರ್ವಹಿಸಿದರು.

ಸ್ವತಂತ್ರ ಭಾರತದಲ್ಲಿ ಲೇಹ್‌ನ ಮೊದಲ ತಹಸೀಲ್ದಾರ್ ಆಗಿ ಫುಂಟ್ಸಾಗ್ ಅವರನ್ನು ನೇಮಿಸಲಾಯಿತು. ದುರದೃಷ್ಟವಶಾತ್, ಅವರು ಶೀಘ್ರದಲ್ಲೇ ಕೋಮು ರಾಜಕೀಯದಿಂದ ಹಿಂದಕ್ಕೆ ಸಿರಯಬೇಕಾಯಿತು. ಅಂತಿಮವಾಗಿ 1950 ರಲ್ಲಿ ಕಚೇರಿಗೆ ರಾಜೀನಾಮೆ ನೀಡಿದರು.
1959 ರಲ್ಲಿ ಮಸ್ಸೂರಿಗೆ ತೆರಳಿದರು, ಅಲ್ಲಿ ಹೊಸ ಒಡಂಬಡಿಕೆಯ ಟಿಬೆಟಿಯನ್ ಆವೃತ್ತಿಯ ಪರಿಷ್ಕರಣೆಯ ಕೆಲಸವನ್ನು ಪ್ರಾರಂಭಿಸಿದರು.

ದುಃಖಕರವೆಂದರೆ 1973 ರಲ್ಲಿ ನಿಧನರಾದರು. ಅವರ ಅಕಾಲಿಕ ಮರಣವು ಅನೇಕ ಬಡವರಿಗೆ ದೊಡ್ಡ ನಷ್ಟವಾಗಿದೆ. ನನಗೆ, ಬಡವರ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಪ್ರಾಮಾಣಿಕ ಸ್ನೇಹಿತರಾಗಿದ್ದರು ಎಂದು ಚಂದ್‌ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!