ವಯಸ್ಸು ಮೂವತ್ತು ದಾಟಿದ್ಯಾ? ಹಾಗಿದ್ರೆ ಇನ್ನು ರೆಟಿನಾಲ್ ಬಳಕೆಯ ಸಮಯ ಬಂದಿದೆ ಎಂದರ್ಥ. ವಯಸ್ಸಾದ ನಂತರ ರಿಂಕಲ್ಸ್, ಫೈನ್ ಲೈನ್ಸ್ ಹಾಗೂ ಡಲ್ ಸ್ಕಿನ್ ಬೇಡ ಎನ್ನೋದಾದ್ರೆ ಇಂದೇ ರೆಟಿನಾಲ್ ಬಳಕೆ ಆರಂಭಿಸಿ.
ಯಾವುದೇ ರೆಟಿನಾಲ್ ಕ್ರೀಮ್, ಸೆರಮ್ ಬಳಕೆ ಮಾಡುವ ಮುನ್ನ ಏನೆಲ್ಲಾ ಕ್ರಮಗಳನ್ನು ಅನುಸರಿಸಬೇಕು ನೋಡಿ..
ಮೊದಲು ಎರಡು ಹನಿ ಅಥವಾ ಎರಡು ಪಂಪ್‌ನಷ್ಟು ಮಾತ್ರ ರೆಟಿನಾಲ್‌ನ್ನು ತೊಳೆದ ಮುಖಕ್ಕೆ ಹಚ್ಚಿ, ಸೆನ್ಸಿಟಿವ್ ಏರಿಯಾ ಅವಾಯ್ಡ್ ಮಾಡಿ.
ಮೊದಲು ವಾರಕ್ಕೆ ಒಮ್ಮೆ, ನಂತರ ವಾರಕ್ಕೆ ಎರಡು ಬಾರಿ ಹೀಗೆ ರೂಢಿ ಮಾಡುತ್ತಾ ಹೋಗಿ. ಇದು ಮೊದಲ ಬಾರಿಗೆ ಸ್ಕಿನ್‌ಗೆ ಅಡ್ಜಸ್ಟ್ ಆಗೋದಿಲ್ಲ. ಇದನ್ನು ಹಚ್ಚಿನ ಮರುದಿನ ಕಡ್ಡಾಯವಾಗಿ ಸನ್‌ಸ್ಕ್ರೀನ್ ಬಳಕೆ ಮಾಡಬೇಕು.
ರೆಟಿನಾಲ್ ಮುಖಕ್ಕೆ ಸೆಟ್ ಆಗಿ ಅದರ ರಿಸಲ್ಟ್ ಸಿಗಲು ಒಂದರಿಂದ ಎರಡು ತಿಂಗಳು ಬೇಕು, ಹಚ್ಚುವ ಸಂದರ್ಭದಲ್ಲಿ ಸ್ಕಿನ್ ಡಲ್, ಕಲೆಗಳು ಆಗುತ್ತಿವೆ ಎನಿಸಬಹುದು. ಆದರೆ ಅದಕ್ಕೆ ಸಮಯ ನೀಡಿ.