ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ವರ್ಷ ಹಿಂಸಾಚಾರದ ಪ್ರಕರಣದಿಂದ ಕುಖ್ಯಾತಿ ಪಡೆದ ಲಖಿಂಪುರ ಖೇರಿ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7ರಲ್ಲಿ ಬಿಜೆಪಿ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಉಳಿದ ಒಂದು ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷ ಮುನ್ನಡೆಯಲ್ಲಿದೆ. ಕೃತ್ಯ ನಡೆದ ನಿಘಾಸನ್ ಕ್ಷೇತ್ರದಲ್ಲಿ 39,975 ಮತಗಳ ಅಂತರದಿಂದ ಬಿಜೆಪಿಯ ಶಶಾಂಕ್ ವರ್ಮಾ ಮುನ್ನಡೆಯಲ್ಲಿದ್ದಾರೆ.
ಸದ್ಯ 403 ಸದಸ್ಯರ ಬಲದಲ್ಲಿರುವ ಉತ್ತರಪ್ರದೇಶದಲ್ಲಿ ಬಿಜೆಪಿ 268 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದು, ಎಸ್ ಪಿ 123, ಕಾಂಗ್ರೆಸ್ 4 ಸ್ಥಾನ ಪಡೆದುಕೊಂಡಿದೆ.
ಕಳೆದ ವರ್ಷ ಕೇಂದ್ರ ಸಚಿವ ಅಜಯ್ ಮಿಶ್ರಾ ಥೇಣಿ ಅವರ ಪುತ್ರ ಆಶಿಶ್ ಮಿಶ್ರಾ, ಪ್ರತಿಭಟನಾ ನಿರತ ರೈತನ ಮೇಲೆ ಕಾರು ಚಲಾಯಿಸಿದ ಆರೋಪವಿತ್ತು. ಈ ಪ್ರಕರಣದಲ್ಲಿ ಪೊಲೀಸರು, ರೈತರು ಸೇರಿ 8 ಜನ ಮೃತಪಟ್ಟಿದ್ದರು.