ಹೊಸದಿಗಂತ ಡಿಜಿಟಲ್ ಡೆಸ್ಕ್:
ಐತಿಹಾಸಿಕ ಲಕ್ಕುಂಡಿಯಲ್ಲಿ 12ನೇ ದಿನ ಉತ್ಖನನದ ವೇಳೆ ಅಪರೂಪದ ತ್ರಿಮುಖ ನಾಗಶಿಲೆ ಪತ್ತೆಯಾಗಿದೆ. ಈ ನಾಗಶಿಲೆಯನ್ನ ಕಪ್ಪು ಬಳಪದ ಕಲ್ಲಿನಲ್ಲಿ ಕೆತ್ತನೆ ಮಾಡಲಾಗಿದೆ.
ತ್ರಿಮುಖ, ಪಂಚಮುಖಿ, ಸಪ್ತಮುಖಿ ಶಿಲೆ ಇರುವ ಕಡೆ ನಿಧಿ.. ತ್ರಿಮುಖ ಸರ್ಪದ ಬಾಯಲ್ಲಿ ಬಿಳಿ ಅಥವಾ ಕೆಂಪು ರತ್ನ ಖಚಿತ ನಾಗಮಣಿ ಇರುತ್ತೆ ಎಂಬ ನಂಬಿಕೆ ಇದೆ. ಘಟ ಸರ್ಪ ವಿಷ್ಣುವಿನ ವಾಹನವಾಗಿದ್ದು, ಈ ತ್ರಿಮುಖ ಶಿಲೆ ಭಾರೀ ಕುತೂಹಲ ಮೂಡಿಸಿದೆ.
ಇದಲ್ಲದೇ ಮುಕುಟಮಣಿ ಆಕೃತಿಯ ಪ್ರಾಚ್ಯಾವಶೇಷ ಕೂಡ ಪತ್ತೆಯಾಗಿದೆ. 10ನೇ ಶತಮಾನದ ನಾಗನಾಥ ದೇವಸ್ಥಾನದ ಅಕ್ಕಪಕ್ಕದಲ್ಲಿರುವ ಸುಮಾರು 18ಕ್ಕೂ ಕುಟುಂಬಗಳು ಬೀದಿಗೆ ಬೀಳುವ ಆತಂಕ ಎದುರಾಗಿದೆ.
ತಲ ತಲಾಂತರಗಳಿಂದ ಕುಟುಂಬ ವಾಸಿಸುತ್ತಿದ್ದು, ಸೂಕ್ತವಾದ ಪರಿಹಾರ ನೀಡಿದ್ರೆ ಮಾತ್ರ ಸ್ಥಳಾಂತರ ಆಗುತ್ತೇವೆ. ನಮ್ಮ ಜಾಗ ಇದಷ್ಟು ಜಾಗವನ್ನ ನೀಡ್ಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲವಾದ್ರೆ ಜಾಗವನ್ನ ಬಿಟ್ಟುಕೊಡಲ್ಲ ಅಂದಿದ್ದಾರೆ.



