Monday, January 12, 2026

ಲಕ್ಕುಂಡಿ ನಿಧಿ ಪ್ರಕರಣ ಕೇಸ್‌ | ಬಂಗಾರವೆಲ್ಲ ನಮ್ಮ ಪೂರ್ವಜರದ್ದು, ವಾಪಾಸ್‌ ಕೊಡಿ ಎಂದ ಫ್ಯಾಮಿಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮನೆಯ ಪಾಯ ತೆಗೆಯುವ ವೇಳೆ ನಿಧಿ ಪತ್ತೆಯಾದ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ನಿಧಿಯನ್ನು ಪ್ರಾಮಾಣಿಕವಾಗಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ್ದ ಕುಟುಂಬ ಇದೀಗ ಈ ಚಿನ್ನಾಭರಣಗಳು ನಮ್ಮ ಪೂರ್ವಜರದ್ದು, ವಾಪಸ್ ನೀಡಿ ಎಂದು ಕೇಳಿದ್ದಾರೆ.

ಗದಗ ಜಿಲ್ಲೆಯಲ್ಲಿರುವ ಲಕ್ಕುಂಡಿ ಗ್ರಾಮ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಚಾಲುಕ್ಯರ ಕಾಲದಲ್ಲಿ ಬಂಗಾರ ನಾಣ್ಯಗಳನ್ನು ತಯಾರಿಸುವ ಠಂಕಸಾಲೆ ಇತ್ತು ಎನ್ನುವುದು ಇತಿಹಾಸದಿಂದ ಗೊತ್ತಾಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಗಂಗಮ್ಮ ರಿತ್ತಿ ಎಂಬುವವರ ಮನೆ ಅಡಿಪಾಯ ತೆಗೆಯುವ ವೇಳೆ ಚಿನ್ನದ ನಿಧಿ ಪತ್ತೆಯಾಗಿದೆ.

ಗಂಗಮ್ಮ ಅವರದ್ದು ಮೂಲತಃ ಬಡಕುಟುಂಬ. ಹಳೇ ಮನೆ ಕೆಡವಿ ಹೊಸ ನಿರ್ಮಾಣ ಮಾಡಲು ಮುಂದಾಗಿದ್ದ ವೇಳೆ ಪತ್ತೆಯಾದ ನಿಧಿಯನ್ನು ರಿತ್ತಿ ಕುಟುಂಬ ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಿದೆ. 470 ಗ್ರಾಂ ಚಿನ್ನಾಭರಣವೀಗ ರಿತ್ತಿ ಕುಟುಂಬಕ್ಕೆ ಕಂಟಕವಾಗಿ ಪರಿಣಮಿಸುತ್ತಿದೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ನಂದಿ ಹಿಲ್ಸ್‌ಗೆ ಹೋಗ್ತಿದೀರಾ? ಚಿರತೆ ಬಂದಿದೆಯಂತೆ ಹುಷಾರು

ಮನೆಕೆಲಸ ನಿಂತಿದೆ. ಮುಂದೆ ಏನು ಮಾಡಬೇಕು ಎಂಬ ಚಿಂತೆ ಕುಟುಂಬದ್ದಾಗಿದೆ. ಅನೇಕ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ. ಬಡತನ ಕುಟುಂಬ ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದೆ. ಅಧಿಕಾರಿಗಳು ಕೂಡ ಯಾವುದೇ ಸ್ಪಷ್ಟ ದಾರಿ ತೋರಿಸುತ್ತಿಲ್ಲ. ಹೀಗಾಗಿ ರಿತ್ತಿ ಕುಟುಂಬ ಆತಂಕದಲ್ಲಿದೆ.

 ಇದು ನಿಧಿಅಲ್ಲ, ಬಂಗಾರ ಮನೆಯಲ್ಲಿ ಸಿಕ್ಕಿದೆ ಎಂಬುದು ಮೆಲ್ನೊಟಕ್ಕೆ ಕಂಡು ಬರುತ್ತಿದೆ. ಆಭರಣಗಳನ್ನು ನೋಡಿದ್ರೆ ಸಾಕಷ್ಟು ಡ್ಯಾಮೇಜ್ ಆಗಿದ್ದು, ಮೇಲ್ನೋಟಕ್ಕೆ ಇದು ಅವರ ಕುಟುಂಬಕ್ಕೆ ಸೇರಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪುರಾತತ್ವ ಇಲಾಖೆ ಪರಿಶೀಲನೆ ನಂತರ ಸತ್ಯ ಗೊತ್ತಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!