ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಹಲವು ಮಹತ್ತರ ಯೋಜನೆಗಳನ್ನು ಕೇಂದ್ರ ಸರ್ಕಾರವು ಜಾರಿಗೊಳಿಸಿದೆ.
ಲಕ್ಷದ್ವೀಪಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವಂತೆ ಕೇಂದ್ರ ಸರ್ಕಾರವು ಮೊಟ್ಟ ಮೊದಲನೆಯದಾಗಿ ಅಲ್ಲಿನ ಸಂಪರ್ಕ ವ್ಯವಸ್ಥೆಯನ್ನು ಸರಿಪಡಿಸಲು ಮುಂದಾಗಿದೆ.
ಅಗತ್ತಿ ದ್ವೀಪಕ್ಕೆ ವಿಮಾನಯಾನ ಸೇವೆಯನ್ನು ಕಲ್ಪಿಸಲು ಸರ್ಕಾರವು ಫ್ಲೈ 19 ಹಾಗೂ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆಗೆ ಅನುಮತಿಯನ್ನು ಕೋರಿವೆ.
ಈ ಬಗ್ಗೆ ಚರ್ಚೆ ನಡೆಸಿರುವ ಇಂಡಿಗೋ ವಿಮಾನಯಾನ ಸಂಸ್ಥೆಯು ದ್ವೀಪಕ್ಕೆ ವಿಮಾನಯಾನ ಸಂಪರ್ಕವನ್ನು ಒದಗಿಸಲು ಲಕ್ಷದ್ವೀಪದ ಅಧಿಕಾರಿಗಳೊಂದಿಗೆ ತಮ್ಮ ಆಸಕ್ತಿಯನ್ನು ವ್ಯಕ್ತ ಪಡಿಸಿದ್ದಾರೆ. ಇನ್ನು ಫ್ಲೈ 19 ವಿಮಾನ ಸಂಸ್ಥೆಯು ಈ ತಿಂಗಳ ಕೊನೆಯಲ್ಲಿ ದ್ವೀಪಕ್ಕೆ ವಿಮಾನಯಾನ ಸೇವೆಯನ್ನು ಆರಂಭಿಸಲಿದೆ ಎಂದು ಮೂಲಗಳು ತಿಳಿಸಿವೆ.
ಅಲೈನ್ಸ್ ವಿಮಾನಯಾನ ಸಂಸ್ಥೆ ಮಾತ್ರ ಪ್ರಸ್ತುತ ಅಗತ್ತಿ ದ್ವೀಪಕ್ಕೆ ವಿಮಾನಯಾನ ಸೇವೆಯನ್ನು ಕಲ್ಪಿಸುತ್ತಿದ್ದು, ಈ ವಿಮಾನ ಸೇವೆ ಕೇವಲ ಬುಧವಾರ ಹಾಗೂ ಭಾನುವಾರ ಲಭ್ಯವಿರುತ್ತದೆ.
ದ್ವೀಪದಲ್ಲಿ ಸಂಪರ್ಕ ವ್ಯವಸ್ಥೆಯು ಸಂಪೂರ್ಣವಾದ ಬಳಿಕ, ಮುಂದಿನ ಯೋಜನೆಯಾದ ವಸತಿ ಸೇವೆ ಪ್ರವಾಸಿಗರಿಗೆ ಒದಗಿಸಲು ಸರ್ಕಾರ ಚಿಂತನೆ ನಡೆಸಿದೆ. ಸುಹೇಲಿ, ಮಿನಿಕಾಯ್ ಮತ್ತು ಕಡ್ಕಟ್ ದ್ವೀಪಗಳಲ್ಲಿ ತಾಜ್ ರೆಸಾರ್ಟ್‌ಗಳನ್ನು ಆರಂಭಿಸುವುದಾಗಿ ಟಾಟಾ ಸಂಸ್ಥೆಯು ತಿಳಿಸಿದೆ.