ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ವುಡ್ ನಿರ್ದೇಶಕ ಪವನ್ ಒಡೆಯರ್ ಮನೆಯಲ್ಲಿ ಸಂಭ್ರಮ ಕುಣಿದಾಡುತ್ತಿದೆ, ಇದಕ್ಕೆ ಕಾರಣ ಪುಟ್ಟ ಲಕ್ಷ್ಮೀ, ಹೌದು, ಪವನ್ ಪತ್ನಿ ಅಪೇಕ್ಷಾ ಎರಡನೇ ಮಗುವಿಗೆ ಜನ್ಮ ನೀಡಿದ್ದು, ಮಗಳ ಆಗಮನದಿಂದ ಕುಟುಂಬ ಸಂತಸದಲ್ಲಿದೆ.
ಪವನ್ ಒಡೆಯರ್ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಶೇರ್ ಮಾಡಿದ್ದು, ತಾಯಿ ಮಗು ಆರಾಮಾಗಿದ್ದಾರೆ ಎಂದು ತಿಳಿಸಿದ್ದಾರೆ. ಇವರಿಗೆ ಈಗಾಗಲೇ ಗಂಡು ಮಗು ಇದ್ದು, ಎರಡನೇ ಮಗು ಹೆಣ್ಣಾಗಿರುವುದಕ್ಕೆ ಭಾರೀ ಖುಷಿಪಟ್ಟಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ಕೆಲವೇ ದಿನಗಳಲ್ಲಿ ಡಿಸ್ಚಾರ್ಜ್ ಮಾಡಲಾಗುತ್ತದೆ.