ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರನ್ನು ಪರಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ದೆಹಲಿಗೆ ತೆರಳುವ ಸಲುವಾಗಿ ಸಂಜೆ ಪಾಟ್ನಾ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಲಾಲೂ ಪ್ರಸಾದ್ ಯಾದವ್ ಅವರ ಬ್ಲಡ್ ಶುಗರ್ ಲೆವೆಲ್ ಏರಿಕೆಯಾಗಿ ಆರೋಗ್ಯ ಹದಗೆಟ್ಟಿದೆ.
ಬಿಹಾರದ 13 ಕೋಟಿ ಜನರ ಆಶೀರ್ವಾದ ಲಾಲೂ ಪ್ರಸಾದ್ ಯಾದವ್ ಅವರೊಂದಿಗಿದೆ. ಚಿಂತಿಸುವ ಅಗತ್ಯವಿಲ್ಲ ಎಂದು ಆರ್‌ಜೆಡಿ ನಾಯಕ ಭಾಯಿ ವೀರೇಂದ್ರ ತಿಳಿಸಿದ್ದಾರೆ.