ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಶಿಖೋಪುರ ಭೂ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಬರ್ಟ್ ವಾದ್ರಾ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಪೂರಕ ಪ್ರಾಸಿಕ್ಯೂಷನ್ ದೂರು (ಚಾರ್ಜ್ಶೀಟ್) ಸಲ್ಲಿಸಿದೆ.
ರಾಬರ್ಟ್ ವಾದ್ರಾ ಸೇರಿದಂತೆ 11 ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ.
ರಾಬರ್ಟ್ ವಾದ್ರಾ ಮತ್ತು ಅವರ ಸಂಸ್ಥೆಗಳಿಗೆ ಸಂಬಂಧಿಸಿದ 36 ಕೋಟಿ ರೂ.ಗೂ ಹೆಚ್ಚು ಮೌಲ್ಯದ 43 ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2018 ರಲ್ಲಿ ನಡೆದಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಬರ್ಟ್ ವಾದ್ರಾ, ಆಗಿನ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಮತ್ತು ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ, ರಿಯಲ್ ಎಸ್ಟೇಟ್ ದೈತ್ಯ ಡಿಎಲ್ಎಫ್ ಮತ್ತು ಆಸ್ತಿ ವ್ಯಾಪಾರಿಯ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಎಫ್ಐಆರ್ ಭ್ರಷ್ಟಾಚಾರ, ನಕಲಿ ಮತ್ತು ವಂಚನೆ ಸೇರಿದಂತೆ ಇತರ ಆರೋಪಗಳನ್ನು ಒಳಗೊಂಡಿದೆ.
ದೆಹಲಿಯ ವಿಶೇಷ ಪಿಎಂಎಲ್ಎ (ಹಣ ವರ್ಗಾವಣೆ ತಡೆ ಕಾಯ್ದೆ) ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಆರೋಪಪಟ್ಟಿಯಲ್ಲಿ ರಾಬರ್ಟ್ ವಾದ್ರಾ ಅವರ ಕಂಪನಿಯಾದ ಸ್ಕೈಲೈಟ್ ಹಾಸ್ಪಿಟಾಲಿಟಿಯು 2008 ರಲ್ಲಿ 7.5 ಕೋಟಿ ರೂ.ಗೆ ಶಿಖೋಪುರದಲ್ಲಿ (ಈಗ ಸೆಕ್ಟರ್ 83) 3.53 ಎಕರೆ ಭೂಮಿಯನ್ನು ಖರೀದಿಸಿತು. ನಂತರ ಅದೇ ಭೂಮಿಯನ್ನು ಯೋಜನೆ ಪೂರ್ಣಗೊಳ್ಳದೆ 58 ಕೋಟಿ ರೂಪಾಯಿಗೆ ಮಾರಾಟ ಮಾಡಲಾಯಿತು. ನಂತರ ವಾದ್ರಾ ಅವರ ಕಂಪನಿಯು ಆ ಭೂಮಿಯನ್ನು ರಿಯಲ್ ಎಸ್ಟೇಟ್ ದೈತ್ಯ ಡಿಎಲ್ಎಫ್ಗೆ 58 ಕೋಟಿ ರೂ.ಗೆ ಮಾರಾಟ ಮಾಡಿತು. ಈ ಆದಾಯವು ಅಕ್ರಮ ವರ್ಗಾವಣೆ ಯೋಜನೆಯ ಭಾಗವಾಗಿರಬಹುದು ಎಂದು ಶಂಕಿಸಿರುವ ಕೇಂದ್ರ ಸಂಸ್ಥೆ, ಈ ಅನಿರೀಕ್ಷಿತ ಲಾಭದ ಹಿಂದಿನ ಹಣದ ಹಾದಿಯನ್ನು ತನಿಖೆ ನಡೆಸುತ್ತಿದೆ.