ಭೂಕಬಳಿಕೆ ಪ್ರಕರಣ: ನಾಪತ್ತೆಯಾಗಿರುವ ಶಹಜಹಾನ್ ನ ಸಹೋದರನಿಗೆ ಸಿಬಿಐ ಸಮನ್ಸ್ ಜಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಂದೇಶ್ ಖಲಿಯಲ್ಲಿ ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಟಿಎಂಸಿ ನಾಯಕ ಶಹಜಹಾನ್ ನ ನಾಪತ್ತೆಯಾಗಿರುವ ಸಹೋದರನಿಗೆ ಸಮನ್ಸ್ ಜಾರಿ ಮಾಡಿದೆ.

ಟಿಎಂಸಿ ನಾಯಕ ಶಹಜಹಾನ್ ಶೇಖ್ ಬಂಧನಕ್ಕೊಳಗಾಗಿದ್ದು, ಪಕ್ಷದಿಂದ ಅಮಾನತುಗೊಂಡಿದ್ದಾರೆ. ಶಹಜಹಾನ್ ಸಹೋದರ ಶೇಖ್ ಸಿರಾಜುದ್ದೀನ್ ಈ ಭೂಕಬಳಿಕೆ ಹಗರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ನಾಪತ್ತೆಯಾಗಿದ್ದಾನೆ.

ಹೀಗಾಗಿ ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 6 ರಂದು ಕೋಲ್ಕತ್ತಾ ಕಚೇರಿಯಲ್ಲಿ ನಮ್ಮ ಅಧಿಕಾರಿಗಳ ಮುಂದೆ ಹಾಜರಾಗುವಂತೆ ನಾವು ಶಾಜಹಾನ್ ಅವರ ಸಹೋದರನಿಗೆ ಸಮನ್ಸ್ ನೀಡಿದ್ದೇವೆ. ನಮ್ಮ ಅಧಿಕಾರಿಗಳು ಅವರನ್ನು ಹುಡುಕಲು ಅವರ ನಿವಾಸಕ್ಕೆ ಹೋದರು ಆದರೆ ಅವರು ಅಲ್ಲಿ ಇರಲಿಲ್ಲ ಎಂದು ಅಧಿಕಾರಿ ತಿಳಿದ್ದಾರೆ.

ಸಿರಾಜುದ್ದೀನ್ ನಿವಾಸದಿಂದ ತೆರಳುವ ಮುನ್ನ ಸಿಬಿಐ ಅಧಿಕಾರಿಗಳು ಅವರ ನಿವಾಸದ ಮುಂಭಾಗ ‘ಸಮನ್ಸ್’ ನೋಟಿಸ್ ಅಂಟಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!