ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮಳೆ ಶುರುವಾಗಿದ್ದು, ಇದರ ಬೆನ್ನಲ್ಲೇ ಭೂಕುಸಿತ (Landslide) ಉಂಟಾಗದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ವಿಪತ್ತು ನಿರ್ವಹಣಾ ಪ್ರಾಧಿಕಾರದ (Disaster Management Authority) ಉಪಾಧ್ಯಕ್ಷ ಕೃಷ್ಣಭೈರೇಗೌಡ (Krishna Byre Gowda) ಸೂಚನೆ ನೀಡಿದ್ದಾರೆ.
2018ರಲ್ಲಿ ಕೊಡಗು (Kodagu) ಭಾಗದಲ್ಲಿ ಉಂಟಾದ ಭೂಕುಸಿತದಿಂದ ಕನಿಷ್ಠ 21ಕ್ಕೂ ಅಧಿಕ ಜನ ಮೃತಪಟ್ಟಿದ್ದರು. ರಾಜ್ಯದಲ್ಲಿ ಮತ್ತೊಮ್ಮೆ ಇಂತಹ ಕಹಿ ಘಟನೆ ಸಂಭವಿಸಬಾರದು. ಈ ಬಾರಿ ಮೂಡಿಗೆರೆ, ಸುಳ್ಯ, ಭಾಗಮಂಡಲ, ಮಡಿಕೇರಿ, ವಿರಾಜಪೇಟೆ ಸಕಲೇಶಪುರ ಸೇರಿ ಕೆಲವು ಭಾಗಗಳಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕೆಂದು ಸೂಚಿಸಿದ್ದಾರೆ.
ಮಳೆ ನೀರಿನ ಜೊತೆಗೆ ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ಹರಿಸುವ ಮೂಲಕ ರಾಜಕಾಲುವೆ ಮೇಲಿನ ಒತ್ತಡ ಕಡಿಮೆ ಮಾಡಿ ಪ್ರವಾಹವನ್ನು ನಿಯಂತ್ರಿಸಬಹುದು. ಕೆರೆಯ ನೀರನ್ನೂ ಸದ್ಭಳಕೆ ಮಾಡಿಕೊಳ್ಳಬಹುದು. ಈ ಸಂಬಂಧ 250 ಕೋಟಿ ಕೋಟಿ ರೂ.ಗಳ ಹೆಚ್ಚವರಿ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿ ಎಂದರು.
ಅದೇ ರೀತಿ ಬೆಂಗಳೂರಿನಲ್ಲಿ ಪ್ರತಿ ಮಳೆಗಾಲದಲ್ಲೂ ಪ್ರವಾಹದ ಸ್ಥಿತಿ ತಲೆದೋರಿದೆ. ನಾಯಂಡಹಳ್ಳಿ, ಹೆಬ್ಬಾಳ, ನಾಗವಾರ ಸೇರಿ ಹಲವೆಡೆ ಸಮಸ್ಯೆ ಆಗಲಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಎಲ್ಲ ಕೆರೆಗಳನ್ನು ಅಭಿವೃದ್ಧಿಪಡಿಸುವ ಸಂಬಂಧ ಶೀಘ್ರದಲ್ಲೇ ವರದಿ ಸಲ್ಲಿಸಿ ಎಂದು ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಿದ್ದಾರೆ.