ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಮಾಚಲ ಪ್ರದೇಶದ ಕುಲ್ಲುವಿನ ಗುರುದ್ವಾರ ಮಣಿಕರಣ್ ಸಾಹಿಬ್ ಬಳಿ ಇಂದು ಸಂಭವಿಸಿದ ಭೂಕುಸಿತದಿಂದ ಮರ ಬಿದ್ದು ಆರು ಜನರು ಸಾವನ್ನಪ್ಪಿದ್ದು, ಐದು ಜನರು ಗಾಯಗೊಂಡಿದ್ದಾರೆ.
“ಕುಲ್ಲುವಿನ ಮಣಿಕರಣ್ ಗುರುದ್ವಾರ ಪಾರ್ಕಿಂಗ್ ಬಳಿ ಮರಗಳು ಉರುಳಿ ಬಿದ್ದ ಪರಿಣಾಮ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಐದು ಜನರು ಗಾಯಗೊಂಡಿದ್ದಾರೆ. ಜಿಲ್ಲಾಡಳಿತದ ಪೊಲೀಸರು ಮತ್ತು ರಕ್ಷಣಾ ತಂಡಗಳು ಐದು ಮಂದಿ ಗಾಯಾಳುಗಳನ್ನು ಸ್ಥಳೀಯ ಸಮುದಾಯ ಆಸ್ಪತ್ರೆಗೆ ಸ್ಥಳಾಂತರಿಸಿವೆ” ಎಂದು ಕುಲ್ಲು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಶ್ವನಿ ಕುಮಾರ್ ತಿಳಿಸಿದ್ದಾರೆ.
“ಮಣಿಕರಣ್ ಗುರುದ್ವಾರದ ಬಳಿ ಈ ಘಟನೆ ನಡೆದಿದ್ದು, ಮರವೊಂದು ಬುಡಮೇಲಾಗಿದೆ… ಮೃತದೇಹಗಳನ್ನು ಆಸ್ಪತ್ರೆಗೆ ತರಲಾಗುತ್ತಿದೆ ಮತ್ತು ನಾಲ್ವರು ಗಾಯಾಳುಗಳನ್ನು ಸಹ ಇಲ್ಲಿಗೆ ತರಲಾಗುತ್ತಿದೆ… ಪೊಲೀಸ್ ತಂಡ ಮತ್ತು ಆಡಳಿತ ಸ್ಥಳದಲ್ಲಿದೆ” ಎಂದು ಕುಲ್ಲು ಶಾಸಕ ಸುಂದರ್ ಸಿಂಗ್ ಠಾಕೂರ್ ತಿಳಿಸಿದ್ದಾರೆ.