ಹೊಸದಿಗಂತ ಡಿಜಿಟಲ್ ಡೆಸ್ಕ್:
ವಯನಾಡಿನ ಭೂಕುಸಿತದಲ್ಲಿ ಸಾವಿನ ಸಂಖ್ಯೆ 288ಕ್ಕೆ ಏರಿಕೆಯಾಗಿದೆ. 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.
ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಲವು ನಟ ನಟಿಯರು ವಯನಾಡು ದುರಂತದ ಪರಿಹಾರಕ್ಕೆ ದೇಣಿಗೆ ನೀಡಿದ್ದಾರೆ. ಇದೀಗ ನಟಿ ರಶ್ಮಿಕಾ ಮಂದಣ್ಣ , ವಯನಾಡಿನಲ್ಲಿ ಬದುಕು ಕಟ್ಟಿಕೊಳ್ಳಲು ನೆರವಾಗಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.
ವಯನಾಡಿನ ಪರಿಸ್ಥಿತಿ ನಟಿ ರಶ್ಮಿಕಾ ಮಂದಣ್ಣಗೆ ತೀವ್ರ ನೋವುಂಟು ಮಾಡಿದೆ. ಘಟನೆಗೆ ಮಿಡಿದ ರಶ್ಮಿಕಾ ಮಂದಣ್ಣ ಸದ್ದಿಲ್ಲದೆ 10 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ತಾವು ದೇಣಿಗೆ ನೀಡಿರುವ ಮಾಹಿತಿಯನ್ನು ರಶ್ಮಿಕಾ ಸೋಶಿಯಲ್ ಮೀಡಿಯಾಗಳಲ್ಲಿ ಎಲ್ಲೂ ಬಹಿರಂಗಪಡಿಸಿಲ್ಲ.
ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ಸೆಲೆಬ್ರೆಟಿಗಳು ವಯಾನಾಡ್ ದುರಂತಕ್ಕೆ ದೇಣಿಕೆ ನೀಡಿ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ತಮಿಳು ನಟ ವಿಕ್ರಮ್ ಈಗಾಗಲೇ 20 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ತಮಿಳು ನಟ ಸೂರ್ಯ, ಪತ್ನಿ ಜ್ಯೋತಿಕಾ ಹಾಗೂ ಸಹೋದರ ಕಾರ್ತಿ ಜೊತೆಯಾಗಿ 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.
ಭಾರತೀಯ ಸೇನೆ, ವಾಯುಸೇನೆ, ಎನ್‌ಡಿಆರ್‌ಎಫ್, ರಾಜ್ಯ ರಕ್ಷಣಾ ತಂಡಗಳು, ಸ್ವಯಂ ಸೇವಕರು ವಯನಾಡಿನ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಸದ್ಯ ಸಾವಿನ ಸಂಖ್ಯೆ 288ಕ್ಕೆ ಏರಿಕೆಯಾಗಿದೆ. ಇದೀಗ ಹವಾಮಾನ ಇಲಾಖೆ ಮತ್ತೊಂದು ಅಲರ್ಟ್ ನೀಡಿದೆ. ಕೇರಳದ ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದಿದೆ.