ಹೊಸದಿಗಂತ ಡಿಜಿಟಲ್ ಡೆಸ್:
ಹಿಮಾಚಲ ಪ್ರದೇಶದ ಮಂಡಿ ಮತ್ತು ಕುಲು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಬ್ಲಾಕ್ ಆಗಿ ಸಾಕಷ್ಟು ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು, ಹಠಾತ್ ಭೂಕುಸಿತ ಸಂಭವಿಸಿದ್ದು, ಕೆಲ ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿಲ್ಲ. ಹಾಗಾಗಿ ಸಾಕಷ್ಟು ವಾಹನಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲುಕಿ ಸಮಸ್ಯೆ ಅನುಭವಿಸುತ್ತಿವೆ. ಇದರಲ್ಲಿ ಹೆಚ್ಚಿನದ್ದು ಪ್ರವಾಸಿಗರ ವಾಹನಗಳಾಗಿವೆ.
ಪ್ರವಾಸಿಗರಲ್ಲಿ ಪುಟ್ಟ ಮಕ್ಕಳಿರುವ ಸಾಕಷ್ಟು ಮಂದಿ ಇದ್ದು, ಹೆಚ್ಚು ತೊಂದರೆಗೀಡಾಗಿದ್ದಾರೆ. ಸುತ್ತಮುತ್ತಲು ಹೊಟೇಲ್ ಕೋಣೆಯೂ ಸಿಗದೇ ಕಾರ್‌ನಲ್ಲಿಯೇ ಸಮಯ ಕಳೆಯುತ್ತಿದ್ದಾರೆ. ಢಾಬಾಗಳಲ್ಲಿ, ರಸ್ತೆಗಳಲ್ಲಿ ಜನ ಸಮಯ ಕಳೆಯುತ್ತಿದ್ದು, ಟ್ರಾಫಿಕ್ ಜಾಮ್ ಕ್ಲಿಯರ್ ಆಗುವುದನ್ನು ಕಾಯುತ್ತಿದ್ದಾರೆ.